ಲಂಡನ್: ಜರ್ಮನ್ ನ್ಯಾಯಾಂಗ ಸಚಿವಾಲಯ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸುದ್ದಿಗಳು ಮತ್ತು ಉಗ್ರ ಹೇಳಿಕೆಗಳನ್ನು ತಡೆಗಟ್ಟಲು ಹೊಸ ಕಾನೂನು ರೂಪಿಸಲು ಯೋಜಿಸುತ್ತಿದೆ.
ಜರ್ಮನ್ ಕಾನೂನು ಮಂತ್ರಿ ಹೀಕೋ ಮಾಸ್ ಹೊಸ ಕಾನೂನಿನ ವರದಿಯನ್ನು ಪ್ರಕಟಿಸಿದ್ದು, ಇದು ಸಾಮಾಜಿಕ ಜಾಲತಾಣಗಳು ಹೊಸ ಕಾನೂನು ವಿವರಗಳನ್ನು ಬಹಿರಂಗಪಡಿಸುವಂತೆ ಒತ್ತಾಯಿಸಲಿದೆ.
ಈ ಹೊಸ ಕಾನೂನಿನ ಅಡಿಯಲ್ಲಿ ಫೇಸ್ಬುಕ್, ಟ್ವಿಟರ್ ಮತ್ತಿತರ ಜಾಲತಾಣಗಳು ಬಳಕೆದಾರರು ಸುಲಭವಾಗಿ ಗುರುತಿಸಬಹುದಾದ, ನೇರವಾಗಿ ತಲುಪಬಹುದಾದ ಮತ್ತು ನಿರಂತgವಾಗಿ ಲಭ್ಯವಿರುವ ದಂಡನೆಗೆ ಕಾರಣವಾಗುವ ಕಂಟೆಂಟ್ಗಳ ವಿರುದ್ಧ ದೂರು ನೀಡುವ ಪ್ರಕ್ರಿಯೆ ಒದಗಿಸುವ ಅಗತ್ಯವಿದೆ.
ಈ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಇದಕ್ಕೆ ಕಾರಣವಾದ ಉದ್ಯೋಗಿಗೆ ೫.೩ ಮಿಲಿಯನ್ ಡಾಲರ್ ಮತ್ತು ಕಂಪೆನಿ ೫.೩ ಮಿಲಿಯನ್ ಡಾಲರ್ ದಂಡ ವಿಧಿಸಲಾಗುವುದು.
ಜನವರಿ-ಫೆಬ್ರವರಿ ತಿಂಗಳಿನಲ್ಲಿ ಈ ಬಗ್ಗೆ ಪರೀಕ್ಷಿಸಲಾಗಿದ್ದು,ಫೇಸ್ಬುಕ್ ಇಂತಹ ಪ್ರಕರಣಕ್ಕೆ ಸೇರಿದ ಶೇ.೩೯ರಷ್ಟು ಫೇಸ್ಬುಕ್ ಅಕೌಂಟ್ಗಳನ್ನು ತೆಗೆದು ಹಾಕಿದರೆ, ಟ್ವಟರ್ ಇಂತಹ ಆಕ್ಷೇಪಾರ್ಹ ಕಂಟೆಂಟ್ಗಳಿದ್ದ ಕೇವಲ ಶೇ.೧ರಷ್ಟು ಅಕೌಂಟ್ಗಳನ್ನು ಮಾತ್ರ ತೆಗೆದು ಹಾಕಿದೆ ಎಂದು ಜರ್ಮನ್ ನ್ಯಾಯಾಂಗ ಸಚಿವಾಲಯ ಗಮನಿಸಿದೆ.
ಮಕ್ಕಳ ರಕ್ಷಣಾ ಸಂಸ್ಥೆ Jugendschutz.net ಈ ಪರೀಕ್ಷೆ ನಡೆಸಿತ್ತು.