ಲಂಡನ್: 2017ರ ಸಾಲಿನಲ್ಲೂ ಅನಿವಾಸಿ ಭಾರತೀಯರಾದ ಹಿಂದುಜಾ ಸಹೋದರರು ಯುಕೆಯಲ್ಲಿನ ನಂ.1 ಶ್ರೀಮಂತ ಏಷಿಯನ್ನರಾಗಿ ಹೊರಹೊಮ್ಮಿದ್ದಾರೆ. ಇವರ ಬಳಿ ಇರುವ ಆಸ್ತಿಯ ಒಟ್ಟು ಮೊತ್ತ 19 ಬಿಲಿಯನ್ ಪೌಂಡ್ಸ್. ಕಳೆದ ವರ್ಷಕ್ಕಿಂತ ಇವರ ಆಸ್ತಿ ಮೌಲ್ಯ 2.5 ಬಿಲಿಯನ್ ಪೌಂಡ್ಸ್ನಷ್ಟು ಏರಿಕೆಯಾಗಿದೆ.
ಬ್ರಿಟನ್ನಿನಲ್ಲಿರುವ ಶ್ರೀಮಂತ 101 ಏಷಿಯನ್ನರ ಪಟ್ಟಿ ಬಿಡುಗಡೆಯಾಗಿದ್ದು, ಸ್ಟೀಲ್ ಉದ್ಯಮಿ ಲಕ್ಷ್ಮೀ ಎನ್ ಮಿತ್ತಲ್ ಎರಡನೇ ಸ್ಥಾನ ಗಳಿಸಿದ್ದಾರೆ. ಇವರ ಆಸ್ತಿ ಮೌಲ್ಯ 12.6 ಬಿಲಿಯನ್ ಪೌಂಡ್ಸ್. ಕಳೆದ ವರ್ಷಕ್ಕಿಂತ ಇವರ ಆಸ್ತಿ 6.4 ಬಿಲಿಯನ್ ಪೌಂಡ್ಸ್ ಏರಿಕೆಯಾಗಿದೆ.
ಇಂದೋರಮ ಕಾರ್ಪೊರೇಶನ್ ಮುಖ್ಯಸ್ಥ ಪ್ರಕಾಶ್ ಲೋಹಿಯಾ ಅವರು 3ನೇ ಸ್ಥಾನದಲ್ಲಿದ್ದಾರೆ. 4 ಬಿಲಿಯನ್ ಪೌಂಡ್ಸ್ ಆಸ್ತಿ ಇವರಲ್ಲಿದೆ.
ಪಟ್ಟಿಯ ಪ್ರಕಾರ ಹಿಂದುಜಾ ಸಹೋದರರಾದ ಶ್ರೀಚಂದ್ ಮತ್ತು ಗೋಪಿ ಲಂಡನ್ನಿನಲ್ಲಿ ನೆಲೆಸಿದ್ದರೆ, ಪ್ರಕಾಶ್ ಜಿನೆವಾದಲ್ಲಿದ್ದಾರೆ, ಅಶೋಕ್ ಮುಂಬಯಿಯಲ್ಲಿದ್ದಾರೆ. ಇವರ ಆಶೋಕ್ ಲೇಲ್ಯಾಂಡ್, ಇಂದುಸಿಂಧ್ ಬ್ಯಾಂಕ್, ಗಲ್ಫ್ಓಯಿಲ್, ಎನರ್ಜಿ ಮತ್ತು ರಿಯಲ್ ಎಸ್ಟೇಟ್ ಆದಾಯದಲ್ಲೂ ಗಣನೀಯ ಏರಿಕೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.