×
Home About Us Advertise With s Contact Us

ಮಾ.27: ಗುತ್ತಿಗಾರಿನಲ್ಲಿ ಸಭೆ; ಅಂಗಡಿಗಳು ಬಂದ್

Puttur News Logoಸುಬ್ರಹ್ಮಣ್ಯ: ಗುತ್ತಿಗಾರು ಪ್ರದೇಶದ ವಿದ್ಯುತ್ ಸಮಸ್ಯೆ ಬಗ್ಗೆ ಹಾಗೂ ಮೆಸ್ಕಾಂ ಅಧಿಕಾರಿಗಳ ಜೊತೆ ಸಮಾಲೋಚನೆ ಸಭೆ ಮಾ.27 ರಂದು ಬೆಳಗ್ಗೆ 10.30 ಕ್ಕೆ ಗುತ್ತಿಗಾರಿನ ಗಿರಿಜನ ಸಭಾಭವನದಲ್ಲಿ ಗುತ್ತಿಗಾರು ವರ್ತಕ ಸಂಘ, ಯುವಕ ಮಂಡಲ ಗುತ್ತಿಗಾರು ಹಾಗೂ ಭಾರತೀಯ ಕಿಸಾನ್ ಸಂಘ ಮತ್ತು ಜನಹಿತ ವೇದಿಕೆ ಆಶ್ರಯದಲ್ಲಿ ನಡೆಯಲಿದೆ.

ಈ ಸಂದರ್ಭದಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಗುತ್ತಿಗಾರಿನ ಎಲ್ಲಾ ಅಂಗಡಿಗಳು ಸಾಂಕೇತಿಕವಾಗಿ ಬಂದ್ ಮಾಡಿ ಸಭೆಯಲ್ಲಿ ಭಾಗವಹಿಸುವರು. ಗುತ್ತಿಗಾರಿನ ವಿದ್ಯುತ್ ಸಮಸ್ಯೆ ಬಗ್ಗೆ ಅಧಿಕಾರಿಗಳು ಸೂಕ್ತ ಉತ್ತರ ನೀಡಬೇಕು ಎಂದು ಗುತ್ತಿಗಾರು ವರ್ತಕ ಸಂಘದ ಅಧ್ಯಕ್ಷ ವೆಂಕಟ್ರಮಣ ಕೇಂಬ್ರೋಳಿ,ಯುವಕ ಮಂಡಲ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ,ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಗಂಗಾಧರ ಭಟ್ ಪುಚ್ಚಪ್ಪಾಡಿ ತಿಳಿಸಿದ್ದಾರೆ.

 

 

 

 

 

 

 

 

Recent News

Back To Top
error: Content is protected !!