ಕೊಯಮತ್ತೂರು: ತಮಿಳುನಾಡಿನಲ್ಲಿ ಜನರು ತಮ್ಮ 80ನೇ ಜನ್ಮದಿನವನ್ನು ಮದುವೆಯಂತೆ ಆಚರಿಸುವುದು ಸಂಪ್ರದಾಯವಾಗಿದೆ. ಇಲ್ಲಿ ವಯಸ್ಕ ಅಜ್ಜ-ಅಜ್ಜಿಯಂದಿರು ಹೂವಿನ ಹಾರವನ್ನು ಬದಲಿಸಿ ಸಂಭ್ರಮಿಸುವುದು ಕಾಣಲು ಆಕರ್ಷಕ.
ಇದೇ ರೀತಿ ಕೊಯಮತ್ತೂರಿನ ಒಂದು ವಯಸ್ಕ ಜೋಡಿ ಶೌಚಾಲಯ ನಿರ್ಮಿಸಲು ಸಹಕರಿಸುವ ಮೂಲಕ ತಮ್ಮ ಜನ್ಮದಿನ ಆಚರಿಸಲು ನಿರ್ಧರಿಸಿದೆ.
ಕೊಯಮತ್ತೂರನ್ನು ಬಯಲು ಶೌಚ ಮುಕ್ತ ಮಾಡುವ ಕೊಯಮತ್ತೂರು ಮಹಾನಗರಪಾಲಿಕೆಯ ‘ಟಾಯ್ಲೆಟ್ ಫಸ್ಟ್’ ಯೋಜನೆಗೆ ಈ ಜೋಡಿ 2 ಲಕ್ಷ ರೂ. ದಾನ ನೀಡಿದೆ.
ವಿವಿದ ಕಾಲೇಜುಗಳ 1,100ಕ್ಕೂ ಅಧಿಕ ವಿದ್ಯಾರ್ಥಿಗಳು ಶೌಚಾಲಯ ನಿರ್ಮಾಕ್ಕಾಗಿ ಕಾರ್ಯಕರ್ತರಾಗಿ ಪಾಲ್ಗೊಂಡಿದ್ದಾರೆ. ನೃತ್ಯಗಾರ್ತಿ ಮೃದುಲಾ ರಾಯ್ ಪ್ರತಿ ತಿಂಗಳು ಒಂದು ಶೌಚಾಲಯ ನಿರ್ಮಿಸಲು ಕೊಡುಗೆ ನೀಡಲು ಬದ್ಧರಾಗಿದ್ದಾರೆ.
‘ಟಾಯ್ಲೆಟ್ ಫಸ್ಟ್’ ಯೋಜನೆ ಭಾರತದಲ್ಲೇ ಮೊದಲಾಗಿದ್ದು, ಕೊಯಮತ್ತೂರು ಮಹಾನಗರಪಾಲಿಕೆ ಆಯುಕ್ತ ವಿಜಯಕಾರ್ತಿಕೇಯನ್ ಈ ಲಾಭರಹಿತ ಯೋಜನೆ ಆರಂಭಿಸಿದ್ದಾರೆ. ನಿಧಿ ಸಂಗ್ರಹಿಸಲು ಕ್ರೌಡ್ಸೋರ್ಸಿಂಗ್ ಮಾದರಿ ಬಳಸಲಾಗಿದೆ. ಅಲ್ಲದೇ ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಸ್ವಚ್ಛ ಭಾರತ ನಿಧಿ, ರಾಜ್ಯ ಸರ್ಕಾರ, ಸ್ಥಳೀಯ ಸಂಸ್ಥೆಗಳು ಹಾಗೂ ಫಲಾನುಭವಿಗಳಿಂದ ನಿಧಿ ಸಂಗ್ರಹಿಸಲಾಗುತ್ತಿದೆ.
ಟಾಯ್ಲೆಟ್ ಫಸ್ಟ್ ಯೋಜನೆ ಕಳೆದ ಒಂದೂವರೆ ತಿಂಗಳಿನಲ್ಲಿ 600 ಶೌಚಾಲಯಗಳನ್ನು ನಿರ್ಮಿಸಿದ್ದು, ಶೌಚಾಲಯ ಇಲ್ಲದ ಕುಟುಂಬಗಳಿಂದ ಶೌಚಾಲಯ ನಿರ್ಮಾಣಕ್ಕೆ 2,500 ಅರ್ಜಿಗಳನ್ನು ಪಡೆದಿದೆ. ಈ ಯೋಜನೆಯು ಮೇ ತಿಂಗಳಿನಲ್ಲಿ 72 ತಾಸುಗಳಲ್ಲಿ 1000 ಶೌಚಾಲಯಗಳನ್ನು ನಿರ್ಮಿಸುವ ಗುರಿ ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.