ಇಂಫಾಲ: ಮಣಿಪುರದ ನ್ಯಾಷನಲ್ ಪೀಪಲ್ಸ್ ಪಾರ್ಟಿ(ಎನ್ಪಿಪಿ) ಮತ್ತು ಲೋಕ ಜನಹಿತ್ ಪಾರ್ಟಿ (ಎಲ್ಜೆಪಿ) ಪಕ್ಷಗಳು ಬಿಜೆಪಿಗೆ ಬೆಂಬಲ ನೀಡಲು ಮುಂದಾಗಿದ್ದು, ಈ ಮೂಲಕ ಅಲ್ಲಿ ಸರ್ಕಾರ ರಚಿಸುವ ಅವಕಾಶಗಳು ಬಿಜೆಪಿಗೆ ಮತ್ತಷ್ಟು ಹೆಚ್ಚಾಗಿದೆ.
ಈ ಎರಡು ಪಕ್ಷಗಳೊಂದಿಗೆ ಸರ್ಕಾರ ರಚಿಸುವ ಮಾತುಕತೆಗಳು ಫಲಪ್ರದವಾಗಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ.
ಎನ್ಪಿಪಿ ಮತ್ತು ಎಲ್ಜೆಪಿ ಕೇಂದ್ರದಲ್ಲಿ ಎನ್ಡಿಎ ಮೈತ್ರಿ ಪಕ್ಷಗಳು. ಮಣಿಪುರದ ವಿಧಾನಸಭಾ ಚುನಾವಣೆಯಲ್ಲಿ ಎಲ್ಪಿಪಿ 4 ಸ್ಥಾನ ಮತ್ತು ಎಲ್ಜೆಪಿ 1 ಸ್ಥಾನ ಗೆದ್ದುಕೊಂಡಿದೆ. ಬಿಜೆಪಿ 21 ಸ್ಥಾನ ಗೆದ್ದಿದೆ. ಇದೀಗ ಈ ಎರಡು ಪಕ್ಷಗಳ ಬೆಂಬಲದಿಂದ ಬಿಜೆಪಿ ಬಲ 26ಕ್ಕೆ ಏರಿಕೆಯಾಗಿದೆ. ಆದರೆ ಸರ್ಕಾರ ರಚನೆಗೆ 31 ಸ್ಥಾನಗಳ ಅಗತ್ಯವಿದ್ದು, ಇನ್ನೂ 5 ಸ್ಥಾನಗಳು ಬಿಜೆಪಿಗೆ ಕಡಿಮೆ ಬೀಳುತ್ತದೆ.
ಎನ್ಡಿಎ ಮೈತ್ರಿಯ ಮತ್ತೊಂದು ಪಕ್ಷ ನಾಗಾ ಪೀಪಲ್ಸ್ ಪ್ರಾಂಟ್ 4 ಸ್ಥಾನಗಳನ್ನು ಗೆದ್ದುಕೊಂಡಿದೆ. ಇದರ ಬೆಂಬಲ ಬಿಜೆಪಿಗೆ ಸಿಗುವುದು ಬಿಜೆಪಿಗೆ ಬಹುತೇಕ ಖಚಿತ ಎನ್ನಲಾಗಿದೆ. ಉಳಿದ ಒರ್ವ ಶಾಸಕನ ಬೆಂಬಲ ಪಡೆಯುವುದು ಬಿಜೆಪಿಗೆ ದೊಡ್ಡ ಸವಾಲಾಗದು.
ಮಣಿಪುರದಲ್ಲಿ ಕಾಂಗ್ರೆಸ್ 28 ಸ್ಥಾನಗಳನ್ನು ಪಡೆದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.