ನವದೆಹಲಿ: ತನ್ನನ್ನು ಸಂಸತ್ತಿನಲ್ಲಿ ಶ್ಲಾಘಿಸಿದ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರಿಗೆ ಲಕ್ನೋ ಎನ್ಕೌಂಟರ್ನಲ್ಲಿ ಹತನಾದ ಉಗ್ರ ಸೈಫುಲ್ಲಾನ ತಂದೆ ಸರ್ತಾಝ್ ಅವರು ಧನ್ಯವಾದ ಹೇಳಿದ್ದಾರೆ.
‘ನಾನು ಸಚಿವರಿಗೆ ಧನ್ಯವಾದ ಹೇಳುತ್ತೇನೆ, ಸಚಿವರು ಸಾಮಾನ್ಯ ಮನುಷ್ಯನಿಗೂ ಗೌರವ ನೀಡುತ್ತಾರೆ ಎಂಬ ಸಂದೇಶ ಇಡೀ ದೇಶಕ್ಕೆ ತಿಳಿಯಬೇಕು’ ಎಂದು ಸರ್ತಾಝ್ ಹೇಳಿದ್ದಾರೆ.
ಗುರುವಾರ ಲೋಕಸಭೆಯಲ್ಲಿ ಬಜೆಟ್ ಅಧಿವೇಶನದ ವೇಳೆ ಮಾತನಾಡಿದ್ದ ರಾಜನಾಥ್ ಸಿಂಗ್ ’ದೇಶಕ್ಕೆ ದ್ರೋಹ ಬಗೆದ ಉಗ್ರ ಮಗನ ಮೃತದೇಹವನ್ನು ಸ್ವೀಕರಿಸಲು ನಿರಾಕರಿಸಿದ ಸರ್ತಾಝ್ ಬಗ್ಗೆ ನಮಗೆ ಹೆಮ್ಮೆ ಇದೆ’ ಎಂದಿದ್ದರು.
ಲಕ್ನೋ ಎನ್ಕೌಂಟರ್ನಲ್ಲಿ ಸತ್ತಿದ್ದ ಸೈಫುಲ್ಲಾನ ಮೃತದೇಹವನ್ನು ಪಡೆಯಲು ನಿರಾಕರಿಸಿದ್ದ ಸರ್ತಾಝ್, ‘ದೇಶದ್ರೋಹಿ ನಮ್ಮ ಮಗನಲ್ಲ, ನಾವು ಭಾರತೀಯರು, ಇಲ್ಲೇ ಹುಟ್ಟಿದವರು, ನಮ್ಮ ಪೂರ್ವಿಕರೂ ಇಲ್ಲೇ ಹುಟ್ಟಿದ್ದರು. ದೇಶದ್ರೋಹಿ ಚಟುವಟಿಕೆಯಲ್ಲಿ ಭಾಗವಹಿಸಿದಾತ ನಮ್ಮ ಮಗನಾಗಲು ಸಾಧ್ಯವಿಲ್ಲ’ ಎಂದಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.