ವಾಷಿಂಗ್ಟನ್: ಭಾರತೀಯ ಅಮೇರಿಕನ್ ರೋ ಖನ್ನಾ ಸೇರಿದಂತೆ ಅಮೇರಿಕಾದ ನಾಲ್ವರು ಶಾಸಕರು ಯುಎಸ್ ಸೆನೆಟ್ನಲ್ಲಿ H-1B ಮತ್ತು L-1 ವೀಸಾ ಸುಧಾರಣೆ ಬಿಲ್ ಮಂಡಿಸಿದ್ದಾರೆ.
ಅಮೇರಿಕಾ ಕಾಂಗ್ರೆಸ್ನ ಶಾಸಕರಾದ ಬಿಲ್ ಪ್ಯಾಸ್ರೆಲ್, ಡೇವ್ ಬ್ರಾಟ್, ರೋ ಖನ್ನಾ ಹಾಗೂ ಪೌಲ್ ಗೋಸರ್ H-1B ಮತ್ತು L-1 ವೀಸಾ ಸುಧಾರಣಾ ಕಾಯ್ದೆ 2017 ಮಂಡಿಸಿದ್ದು, ಇದು ಯುಎಸ್ ಕಾಂಗ್ರೆಸ್ನ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ ಬಾಕಿ ಇರುವ ಸುಮಾರ್ ಅರ್ಧ ಡಜನ್ ಶಾಸನಗಳಲ್ಲಿ ಒಂದಾಗಿದೆ. ಈ ಎಲ್ಲ ಶಾಸನಗಳು H-1B ಮತ್ತು L-1 ವೀಸಾಗಳ ವಂಚನೆ, ದುರುಪಯೋಗದ ಲೋಪದೋಷಗಳನ್ನು ಮುಚ್ಚುವ ಹಾಗೂ ಅಮೇರಿಕನ್ ಉದ್ಯೋಗಿಗಳು ಮತ್ತು ವೀಸಾ ಹೊಂದಿರುವವರ ರಕ್ಷಣೆಗೆ ಸಂಬಂಧಿಸಿವೆ.
ಭಾರತದ ಐಟಿ ಕೈಗಾರಿಕಾ ಸಂಸ್ಥೆ ನ್ಯಾಸ್ಕಾಂನ ನಿಯೋಗ ಇತ್ತೀಚೆಗೆ ಅಮೇರಿಕಾ ಪ್ರವಾಸ ಕೈಗೊಂಡಿದ್ದು, ಈ ಸಂದರ್ಭ ಅಮೇರಕಾ ಶಾಸಕರನ್ನು ಭೇಟಿ ಮಾಡಿದ ನಿಯೋಗ H-1B ಮತ್ತು L-1 ವೀಸಾ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದೆ.
ಭಾರತೀಯ ಕಂಪೆನಿಗಳು ಸುಲಭವಾಗಿ H-1B ವೀಸಾ ಅವಲಂಬಿತ ಉದ್ಯೋಗಿಗಳಲ್ಲಿ ಶೇ60-70ರಷ್ಟು ಸಂಬಳ ಏರಿಕೆ ನಿರೀಕ್ಷಿಸಲಿದ್ದು, ಪ್ರಸ್ತುತ ಇರುವ ಉದ್ಯೋಗಿಗಳ ಮೇಲೆ ಶೇ.೫-೧೦ರಷ್ಟು ಪರಿಣಾಮ ಬೀರಲಿದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.