Thursday, 14th December 2017
×
Home About Us Advertise With s Contact Us

ಅಮೆರಿಕಾದಲ್ಲಿ ಮತ್ತೋರ್ವ ಭಾರತೀಯನ ಕೊಲೆ

indianನ್ಯೂಯಾರ್ಕ್: ಅಮೆರಿಕಾದಲ್ಲಿ ಮತ್ತೋರ್ವ ಭಾರತೀಯನ ಕೊಲೆಯಾಗಿದೆ. ಸೌತ್ ಕರೋಲಿನದಲ್ಲಿ ಭಾರತೀಯ ಮೂಲದ ಅಂಗಡಿ ಮಾಲೀಕರೊಬ್ಬರನ್ನು ದುಷ್ಕರ್ಮಿಗಳು ಗುಂಡಿಟ್ಟು ಕೊಲೆ ಮಾಡಿದ್ದಾರೆ.

ಕನ್ಸಾಸ್‌ನಲ್ಲಿ ನಡೆದ ಭಾರತೀಯ ಇಂಜಿನಿಯರ್‌ನ ಕೊಲೆ ನಡೆದ ಕೆಲವೇ ದಿನದಲ್ಲಿ ಈ ಘಟನೆ ನಡೆದಿರುವುದು ಭಾರತೀಯರಲ್ಲಿ ಆತಂಕ ಮೂಡಿಸಿದೆ.

43 ವರ್ಷದ ಹರ್ನಿಶ್ ಪಟೇಲ್ ಸೌತ್ ಕೆರೋಲಿನಾದ ಲ್ಯಾನ್‌ಕಸ್ಟರ್ ಕೌಂಟಿಯಲ್ಲಿ ಅಂಗಡಿ ಹೊಂದಿದ್ದರು, ಇವರ ಶವವೂ ಗುರುವಾರ ಇವರ ನಿವಾಸದ ಮುಂದೆ ಪತ್ತೆಯಾಗಿದೆ.

ಅಂಗಡಿ ಮುಚ್ಚಿ ಸಮೀಪದಲ್ಲಿದ್ದ ತನ್ನ ಮನೆಗೆ ತೆರಳುವ ವೇಳೆ ದುಷ್ಕರ್ಮಿಗಳು ಇವರಿಗೆ ಗುಂಡು ಹಾರಿಸಿರಬಹುದು ಎಂದು ಪೊಲೀಸರು ಅನುಮಾನಿಸಿದ್ದಾರೆ.

ಇದು ಜನಾಂಗೀಯ ದ್ವೇಷದಿಂದ ನಡೆದ ಕೊಲೆಯೇ ಅಥವಾ ಬೇರೆ ಕಾರಣದಿಂದ ನಡೆದಿರಬಹುದೇ ಎಂಬ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ.

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top