ನವದೆಹಲಿ: ಶೀಘ್ರದಲ್ಲೇ ಭಾರತೀಯ ರೈಲ್ವೇ ಆಧಾರ್ ಸಂಖ್ಯೆ ಆಧಾರಿಸಿದ ಆನ್ಲೈನ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಿದೆ. ಹೀಗಾಗಿ ಇನ್ನು ಮುಂದೆ ರೈಲು ಟಿಕೆಟ್ ಬುಕ್ ಮಾಡುವ ಪ್ರಯಾಣಿಕರು ತಮ್ಮ ಆಧಾರ್ ಕಾರ್ಡ್ನ್ನು ಸಲ್ಲಿಸುವುದು ಕಡ್ಡಾಯವಾಗಲಿದೆ.
ಟಿಕೆಟ್ ಬುಕ್ಕಿಂಗ್ ವೇಳೆ ನಡೆಯುವ ಮೋಸ, ವಂಚನೆಗಳನ್ನು ತಡೆಯುವ ಉದ್ದೇಶದಿಂದ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಎಪ್ರಿಲ್.1 ರಿಂದ ಈ ನಿಯಮ ಜಾರಿಗೆ ಬರಲಿದ್ದು, ಇದರ 3 ತಿಂಗಳ ಪರೀಕ್ಷಾರ್ಥ ಪ್ರಯತ್ನ ಸದ್ಯ ನಡೆಯುತ್ತಿದೆ.
ಹಿರಿಯ ನಾಗರಿಕರು ಕೂಡ ರೈಲು ಟಿಕೆಟ್ನಲ್ಲಿ ವಿನಾಯಿತಿ ಪಡೆಯಲು ಆಧಾರ್ ಕಾರ್ಡ್ ಸಲ್ಲಿಕೆ ಮಾಡುವುದು ಕಡ್ಡಾಯ. ಸುಳ್ಳು ಗುರುತು ನೀಡಿ ಟಿಕೆಟ್ ಬುಕ್ ಮಾಡುವುದನ್ನು ತಡೆಯುವುದೇ ಇದರ ಮುಖ್ಯ ಉದ್ದೇಶವಾಗಿದೆ.
ಆಧಾರ್ ಸಂಖ್ಯೆ ಆಧಾರಿತ ಆನ್ಲೈನ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಮಾತ್ರವಲ್ಲದೇ ನಗದು ರಹಿತ ಟಿಕೆಟ್ ವ್ಯವಸ್ಥೆಯನ್ನೂ ತರಲು ಯೋಜನೆ ರೂಪಿಸಲಾಗಿದ್ದು, ಇದಕ್ಕಾಗಿ 6 ಸಾವಿರ ಪಾಯಿಂಟ್ಗಳ ಸೇಲ್ ಮೆಶಿನ್, 1 ಸಾವಿರ ಅಟೋಮ್ಯಾಟಿಕ್ ಟಿಕೆಟ್ ವೆಂಡಿಂಗ್ ಮೆಶಿನ್ಗಳನ್ನು ದೇಶದಾದ್ಯಂತ ಅಳವಡಿಸಲು ತೀರ್ಮಾನಿಸಲಾಗಿದೆ.
ನಗದು ರಹಿತ ವ್ಯವಹಾರವನ್ನು ಪ್ರಚುರಪಡಿಸಲು ಇಂಟಿಗ್ರೇಟೆಡ್ ಟಿಕೆಟಿಂಗ್ ಅಪ್ಲಿಕೇಶನ್ವೊಂದನ್ನು ಮೇನಲ್ಲಿ ಆರಂಭಿಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.