ಹೈದರಾಬಾದ್: ಆರೋಗ್ಯಕ್ಕೆ ಸಂಬಂಧಿಸಿದ ಅಂಕಿ-ಅಂಶಗಳು ಮತ್ತು ರೋಗಿಗಳಿಗೆ ಸಂಬಂಧಿಸಿದ ಇತರ ಎಲ್ಲಾ ದಾಖಲೆಗಳನ್ನು ಸಂಪೂರ್ಣ ಕಾಗದ ರಹಿತವಾಗಿ ಸಂಗ್ರಹಿಸಿಡಲು ಮುಂದಾಗಿರುವ ತೆಲಂಗಾಣ ಸರ್ಕಾರ ಕಸ್ಟಮ್ ಆಧಾರಿದ ನೂತನ ತಂತ್ರಾಂಶ ANMOL ನ್ನು ಒಳಗೊಂಡ ಟ್ಯಾಬ್ ಬಿಡುಗಡೆಗೊಳಿಸಿದೆ.
ತೆಲಂಗಾಣ ಆರೋಗ್ಯ ಸಚಿವ ಸಿ.ಲಕ್ಷ್ಮೀ ರೆಡ್ಡಿಯವರು ANMOLಗೆ ಚಾಲನೆ ನೀಡಿದ್ದು, ಇದರಿಂದಾಗಿ ಸಹಾಯಕ ಶುಶ್ರೂಷಕಿಯರಿಗೆ ರೋಗಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು, ಆರೋಗ್ಯ ಅಂಕಿಅಂಶಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿಡಲು ಸಾಧ್ಯವಾಗಲಿದೆ, ಅಲ್ಲದೇ ಅಂಕಿಅಂಶಗಳು ಸ್ವಯಂಚಾಲಿತವಾಗಿ ಸೆಂಟ್ರಲ್ ಸರ್ವರ್ನಲ್ಲಿ ಬ್ಯಾಕ್ ಅಪ್ ಆಗಲಿದೆ.
ರಾಜ್ಯದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಸಹಾಯಕ ನರ್ಸ್ ಶುಶ್ರೂಷಕಿಯರಿಗೆ ಈಗಾಗಲೇ 4,900ಅನ್ಮೋಲ್ ಗಳನ್ನು ವಿತರಿಸಲಾಗಿದೆ.
ಟ್ಯಾಬ್ ಮತ್ತು ಸಾಫ್ಟ್ವೇರ್ಗಳನ್ನು ಅತೀ ಸಮರ್ಥವಾಗಿ ಬಳಸುವಂತೆ ಯುನಿಸೆಫ್ನ ಪ್ರತಿನಿಧಿಗಳು ಶೀಘ್ರದಲ್ಲೇ ಶುಶ್ರೂಷಕಿಯರಿಗೆ ತರಬೇತಿ ನೀಡಲಿದ್ದಾರೆ ಎಂದು ಸರ್ಕಾರ ಹೇಳಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವರು, ಕೇಂದ್ರ ಸರ್ಕಾರ ಸಹಾಯಕ ಶುಶ್ರೂಷಕಿಯರಿಗೆ ಟ್ಯಾಬ್ ನೀಡಲು ಮುಂದಾಗಿದೆ, ಶುಶ್ರೂಷಕಿಯರು ಬಡ ಜನರಿಗೆ ಚಿಕಿತ್ಸೆ ನೀಡಲು ಗ್ರಾಮಗಳಿಗೆ ತೆರಳಿದಾಗ ಅಲ್ಲಿನ ಆರೋಗ್ಯ ಅಂಕಿಅಂಶಗಳನ್ನು, ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ತುರ್ತಾಗಿ ರವಾನಿಸಲು ಇದರಿಂದ ಸಾಧ್ಯವಾಗುತ್ತದೆ. ಇದಕ್ಕಾಗಿ ನಾವು ಅವರಿಗೆ ತರಬೇತಿಯನ್ನೂ ನೀಡಲಿದ್ದೇವೆ ಎಂದರು.
ಗ್ರಾಮೀಣ ಭಾಗದ ಬಡ ರೋಗಿಗಳ, ಗರ್ಭಿಣಿಯರ, ತಾಯಂದಿರ, ಮಕ್ಕಳ ಎಲ್ಲಾ ಆರೋಗ್ಯ ಅಂಕಿಅಂಶಗಳು ಇನ್ನು ಮುಂದೆ ಈ ತಂತ್ರಾಂಶದಲ್ಲಿ ಸಿಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.