×
Home About Us Advertise With s Contact Us

ಚಾಂಪಿಯನ್ ಪಟ್ಟ ಉಳಿಸುವ ಭಾರತದ ಕನಸು ಭಗ್ನ

indiaಸಿಡ್ನಿ: ವಿಶ್ವಕಪ್ ಪಂದ್ಯಾವಳಿಯ ಎರಡನೇ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ಭಾರತವನ್ನು 95 ರನ್‌ಗಳಿಂದ ಸೋಲಿಸಿದೆ. ಈ ಮೂಲಕ ವಿಶ್ವಕಪ್ ಫೈನಲ್‌ಗೇರುವ ಭಾರತದ ಕನಸು ಭಗ್ನಗೊಂಡಿದೆ.

ಆರು ಲೀಗ್‌ಗಳನ್ನು ಗೆದ್ದು ಕ್ವಾಟರ್‌ಫೈನಲ್‌ನಲ್ಲಿ ಬಾಂಗ್ಲಾದೇಶವನ್ನು ಮಣಿಸಿ ಸೋಲಿಲ್ಲದ ಸರದಾರರಂತೆ ಮರೆದ ದೋನಿ ಬಾಯ್ಸ್ ಸೆಮಿಫೈನಲ್‌ನಲ್ಲೂ ಉತ್ತಮ ಪ್ರದರ್ಶನ ತೋರಿಸುತ್ತಾರೆ ಎಂಬ ಅಚಲ ನಂಬಿಕೆ ಭಾರತೀಯರಲ್ಲಿತ್ತು. ಆದರೀಗ ಅದು ಸುಳ್ಳಾಗಿದೆ.

ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ 5೦ ಓವರ್‌ಗಳಲ್ಲಿ 7ವಿಕೆಟ್ ನಷ್ಟಕ್ಕೆ 328ರನ್‌ ಗಳಿಸಿತ್ತು.

ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಭಾರತ ಕೇವಲ 46.5 ಓವರ್‌ಗಳಲ್ಲಿ 233 ರನ್ ಪಡೆದು ಸರ್ವಪತನಗೊಂಡಿತು.

ಮಾ.29ರಂದು ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ ಚಾಂಪಿಯನ್ ಪಟ್ಟಕ್ಕಾಗಿ ಕಾದಾಡಲಿದೆ.

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top