ಶ್ರೀನಗರ: ಜನರು ಗ್ರಂಥಾಲಯಗಳಿಗೆ ಆಗಮಿಸುವ ಸಂಸ್ಕೃತಿಯನ್ನು ಮರುಸ್ಥಾಪಿಸುವುದರ ಜೊತೆಗೆ ವಿದ್ಯಾರ್ಥಿಗಳೂ ಸ್ಪರ್ಧಾತ್ಮಕ ಪರೀಕ್ಷೆಗಳಾದ ಜೆಇಇ ಮತ್ತು ಸಿಇಟಿ ಪರೀಕ್ಷೆಗಳಿಗೆ ಪೂರ್ವ ಸಿದ್ಧತೆ ನಡೆಸಲು ಅನುಕೂಲವಾಗುವಂತೆ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಕಂಪ್ಯೂಟರ್ಗಳನ್ನು ಅಳವಡಿಸುವ ಮೂಲಕ ಇ-ಕಲಿಕಾ ಯೋಜನೆಯನ್ನು ಪ್ರಾರಂಭಿಸಿದೆ.
ಈ ಯೋಜನೆಯನ್ನು ಪ್ರಾರಂಭಿಸಲು ಜಮ್ಮು-ಕಾಶ್ಮೀರ ರಾಜ್ಯ ಸರ್ಕಾರ ಮೌಲಾನಾ ಆಜಾದ್ ರಸ್ತೆಯ ಎಸ್ಪಿಎಸ್ ಗ್ರಂಥಾಲಯವನ್ನು ಆಯ್ಕೆ ಮಾಡಿದ್ದು, 148 ಗ್ರಂಥಾಲಯಗಳು ನೀಟ್, ಜೆಇಇ ಮತ್ತು ಸಿಇಟಿ ಆಕಾಂಕ್ಷಿ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ಮತ್ತು ಸಮಗ್ರ ಪರಿಹಾರ ಶಿಕ್ಷಣವನ್ನು ಒದಗಿಸಲಿವೆ ಎಂದು ಜಮ್ಮು-ಕಾಶ್ಮೀರ ರಾಜ್ಯ ಹಣಕಾಸು ಸಚಿವ ಹಬೀಬ್ ದ್ರಾಬು ಹೇಳಿದ್ದಾರೆ.
ವಿದ್ಯಾರ್ಥಿಗಳು ಸಮೀಪದ ಗ್ರಂಥಾಲಯಗಳಿಗೆ ತೆರಳಿ ಫಾರ್ಮ್ಗಳನ್ನು ತುಂಬುವ ಮೂಲಕ ಈ ವ್ಯವಸ್ಥೆಯನ್ನು ಪಡೆಯಬಹುದು. ವಿದ್ಯಾರ್ಥಿಗಳಿಗೆ ಟ್ಯಾಬ್, ಕಂಪ್ಯೂಟರ್, ತಜ್ಞರಿಂದ ವಿನ್ಯಶಸಗೊಳಿಸಿದ ಕಲಿಕಾ ಸಾಮಗ್ರಿಗಳು ಮೊದಲಾದ ಉಪಕರಣಗಳನ್ನು ಒದಗಿಸಲಾಗುವುದು.
ಈ ಯೋಜನೆಯಡಿ ರಾಜ್ಯಾದ್ಯಂತ ಎಲ್ಲ ಸರ್ಕಾರಿ ಗ್ರಂಥಾಲಯಗಳಲ್ಲಿ ಐಟಿ-ಆಧಾರಿತ ಕಲಿಕಾ ವ್ಯವಸ್ಥೆಗಳಾದ ವೀಡಿಯೋ ಉಪನ್ಯಾಸ, ಎ-ಬುಕ್, ಲಿಖಿತ ಟಿಪ್ಪಣಿಗಳು ಎಲ್ಲವನ್ನು ಉಚಿತವಾಗಿ ಒದಗಿಸಲಾಗುವುದು ಎಂದು ಹಬೀಬ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.