ನವದೆಹಲಿ: ಹೆಚ್ಚಿನ ಜನರು ತಮ್ಮ ಸ್ಮಾರ್ಟ್ಫೋನ್ಗಳಿಗೆ ಪಾಸ್ವರ್ಡ್ಗಳನ್ನು ಹಾಕಿದರೆ ಅದು ಭದ್ರವಾಗಿರುತ್ತದೆ ಎಂದು ಭಾವಿಸುತ್ತಾರೆ. ಆದರೆ ಜನರು ಸುಲಭವಾಗಿ ನೆನಪಿಡಲು ಬಳಸುವ ಪಾಸ್ವರ್ಡ್ಗಳು ಹೆಚ್ಚಾಗಿ ಪರಿಚಿತ ಮತ್ತು ಸರಳವಾಗಿರುವುದರಿಂದ ಇದನ್ನು ಊಹಿಸಿಕೊಳ್ಳಲು ಸುಲಭ. ಮೊಬೈಲ್ ಕಳ್ಳರಿಗೆ ಪಾಸ್ವರ್ಡ್ಗಳನ್ನು ಭೇದಿಸಲು ಸುಲಭ ಎಂದು ಹಲವು ಅಧ್ಯಯನಗಳು ಸಾಬೀತುಪಡಿಸಿವೆ.
ಆದ್ದರಿಂದ ನೈಜ ಸಮಯದಲ್ಲಿ ಯಾರು ಮೊಬೈಲ್ ಬಳಸುತ್ತಿದ್ದಾರೆ ಎಂದು ತಿಳಿದುಕೊಳ್ಳುವುದು ಅಗತ್ಯ. ಆದರೆ ಇದು ಪತ್ತೆ ಹಚ್ಚುವುದು ಕಷ್ಟದ ಕೆಲಸ. ಬಿಜಿಯು ಸಂಶೋಧಕರು ಮೊಬೈಲ್ ಬಳಕೆದಾರರು ಸ್ಮಾರ್ಟ್ಫೋನ್ನ ಟಚ್ಸ್ಕ್ರೀನ್ನ್ನು ಯಾವ ರೀತಿ ಪ್ರೆಸ್ ಮಾಡುತ್ತಾರೆ ಎಂಬ ಆಧಾರದ ಮೇಲೆ ೧೪ ಸೆಕೆಂಡ್ಗಳಲ್ಲಿ ಮೊಬೈಲ್ ಕಳ್ಳರನ್ನು ಪತ್ತೆ ಹಚ್ಚುವ ಪರಿಶೀಲನಾ ವಿಧಾನವನ್ನು ಅಭಿವೃದ್ಧಿಪಡಿಸಿದ್ದಾರೆ.
ಸೈಬರ್ಟೆಕ್ ೨೦೧೭ ಹಾಗೂ ಬಿಜಿಯು ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಈ ಸಂಶೋಧನೆಯನ್ನು ಟೆಲ್ ಅವೀವ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆಸಲಾಗಿತ್ತು.
ಅನಧಿಕೃತ ಬಳಕೆದಾರರನ್ನು ಕೇವಲ ೧೪ ಸೆಕೆಂಡ್ಗಳಲ್ಲಿ ಅಥವಾ ಮೊಬೈಲ್ ಸ್ಕ್ರೀನ್ಗಳ ೩೫ ಸ್ಪರ್ಶದಳಗೆ (ಓರ್ವ ಬಳಕೆದಾರ ೧೩.೮ ಸೆಕೆಂಡ್ಗಳಲ್ಲಿ ಸರಾಸರಿ ೩೫ ಬಾರಿ ಮೊಬೈಲ್ ಸ್ಕ್ರೀನ್ ಸ್ಪರ್ಶ ಮಾಡುತ್ತಾನೆ) ಪತ್ತೆ ಹಚ್ಚಬಹುದು ಎಂದು ಸಂಶೋಧನೆ ತಿಳಿಸಿದೆ.
ಕಳ್ಳರು ಮೊಬೈಲ್ ಮಾಲೀಕರಂತೆ ಮೊಬೈಲ್ ಸಾಧನದ ಬಗ್ಗೆ ಚಿರಪರಿಚಿತರಿಲ್ಲದ ಕಾರಣ ಮೊಬೈಲ್ನ ಮಾಹಿತಿಗಳನ್ನು ಕಲೆ ಹಾಕಲು ೩೫ಕ್ಕಿಂತ ಹೆಚ್ಚು ಬಾರಿ ಸ್ಕ್ರೀನ್ ಸ್ಪರ್ಶಿಸಬೇಕಾಗುತ್ತದೆ.
ಸಾಫ್ಟ್ವೇರ್ ಎಂಡ್ ಇನ್ಫಾರ್ಮೇಶನ್ ಸಿಸ್ಟಮ್ಸ್ ಇಂಜಿನಿಯರಿಂಗ್ನ ಪ್ರೊ. ಬ್ರಾಚಾ ಶಪಿಯಾ, ಪ್ರೊ. ಲಿಯರ್ ರೊಕಾಚ್ ಹಾಗೂ ಇಸ್ರಲ್ ಮಿರ್ಸ್ಕಿ ಅಡಿಯಲ್ಲಿ ಸಂಶೋಧಕ ಲೈರನ್ ಬೆನ್ ಕಿಮೋನ್ ಈ ಸಂಶೋಧನೆ ನಡೆಸಿದ್ದು, ಬಳಕೆದಾರರು ಮೊಬೈಲ್ನ ಯಾವ ಭಾಗವನ್ನು ಸ್ಪರ್ಶಿಸುತ್ತಾರೆ, ಬೆರಳಿನ ಎಷ್ಟು ಅಂಶ ಸ್ಪರ್ಶವಾಗುತ್ತದೆ ಮತ್ತು ಎಷ್ಟು ಜೋರಾಗಿ ಸ್ಕ್ರೀನ್ನ್ನು ಪ್ರೆಸ್ ಮಾಡುತ್ತಾರೆ ಎಂಬ ಆಧಾರದಲ್ಲಿ ಈ ಸಂಶೋಧನೆ ನಡೆಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.