ನವದೆಹಲಿ: ನಗದು ಹಣ ಪಾವತಿಸುವ ಮೂಲಕ 2 ಲಕ್ಷಕ್ಕಿಂತ ಅಧಿಕ ಮೌಲ್ಯದ ಆಭರಣ ಖರೀದಿಗೆ ಏಪ್ರಿಲ್. 1 ರಿಂದ ಶೇ.1 ರಷ್ಟು ಟಿಎಸಿಎಸ್ (tax collected at source) ಅನ್ವಯಿಸಲಿದೆ. ಇದುವರೆಗೂ ಇದರ ಮಿತಿ 5 ಲಕ್ಷ ಖರೀದಿವರೆಗೂ ಇತ್ತು.
ಹಣಕಾಸು ಮಸೂದೆ ಪಾಸಾದ ಕ್ಷಣದಿಂದಲೇ ಆಭರಣಗಳನ್ನು ಸಾಮಾನ್ಯ ಸರಕು ಎಂದೇ ಪರಿಗಣಿಸಲಾಗುತ್ತದೆ. ವಿತ್ತ ಸಚಿವ ಜೇಟ್ಲಿ ಅವರು ಮಂಡಿಸಿದ 2017ರ ಬಜೆಟ್ ಮಂಡನೆಯಲ್ಲಿ 3 ಲಕ್ಷಕ್ಕಿಂತ ಅಧಿಕ ನಗದು ವ್ಯವಹಾರಕ್ಕೆ ತಡೆ ನೀಡಿದ್ದು, ಅದಕ್ಕೆ ಪೂರಕವಾಗಿ ಈ ನಿಯಮ ಜಾರಿಗೆ ಬರಲಿದೆ.
ಆಭರಣ ಖರೀದಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಅಧಿನಿಯಮದಲ್ಲಿ ಯಾವುದೇ ನಿರ್ದಿಷ್ಟ ಪ್ರಸ್ತಾಪವಿಲ್ಲ. ಆದರೆ ಚಿನ್ನಾಭರಣವನ್ನೂ ಇದೀಗ ಸಾಮಾನ್ಯ ಸರಕು ಎಂದು ಪರಿಗಣಿಸಲಾಗುತ್ತಿರುವ ಪರಿಣಾಮ ಈ ನಿಯಮ ಅನ್ವಯಿಸಲಿದೆ. 2016-17 ರ ಸಾಲಿನ್ ಮುಂಗಡ ಪತ್ರದಲ್ಲಿ ಸರಕು ಹಾಗೂ ಸೇವೆಗಳಿಗೆ ಸಂಬಂಧಿಸಿದಂತೆ ಶೇ.1 ರಷ್ಟು ಟಿಸಿಎಸ್ ವಿಧಿಸಲಾಗಿತ್ತು.
ಜಾರಿಯಲ್ಲಿರುವ ಆದಾಯ ತೆರಿಗೆ ಅಧಿನಿಯಮ-1961 ರ ಕಲಂ 206 (ಸಿ), ಉಪ ಕಲಂ(1ಡಿ) ಅಡಿಯಲ್ಲಿಯೇ ಈ ಟಿಸಿಎಸ್ ಅನ್ವಯಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.