×
Home About Us Advertise With s Contact Us

ಪ್ರಧಾನಿಯೊಂದಿಗೆ ಬಹಿರಂಗ ಚರ್ಚೆಗೆ ಸಿದ್ಧ ಎಂದ ಅಣ್ಣಾ

annaಪುಣೆ: ಭೂಸ್ವಾಧೀನ ಮಸೂದೆಯ ವಿರುದ್ಧ ಸಮರ ಸಾರಿರುವ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆಯವರು ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಬಹಿರಂಗ ಚರ್ಚೆ ನಡೆಸಲು ಬಯಸುವುದಾಗಿ ತಿಳಿಸಿದ್ದಾರೆ.

ಮಸೂದೆಯ ಬಗ್ಗೆ ಸಚಿವ ನಿತಿನ್ ಗಡ್ಕರಿ ಅವರು ಬಹಿರಂಗ ಚರ್ಚೆಗೆ ಬರುವಂತೆ ನೀಡಿದ ಆಹ್ವಾನವನ್ನು ಸ್ವೀಕರಿಸಿದ ಅವರು ‘ಈ ವಿಷಯದಲ್ಲಿ ಗಡ್ಕರಿಯವರ ಹೋಂವರ್ಕ್ ತುಂಬಾನೇ ವೀಕ್ ಆಗಿದೆ. ನಾವು ಪ್ರಧಾನಿಯೊಂದಿಗೆ ಕ್ಯಾಮೆರಾದ ಮುಂದೆ ಬಹಿರಂಗ ಚರ್ಚೆಗೆ ಸಿದ್ಧರಿದ್ದೇವೆ’ ಎಂದಿದ್ದಾರೆ.

‘ಜನ ನಮ್ಮ ಚರ್ಚೆಯನ್ನು ವೀಕ್ಷಿಸಲಿ ಮತ್ತು ಸತ್ಯ ಯಾವುದೆಂದು ನಿರ್ಧರಿಸಲಿ’ ಎಂದಿದ್ದಾರೆ.

ಭೂಸ್ವಾಧೀನ ಮಸೂದೆ ರೈತ ವಿರೋಧಿ ಎಂದು ಆರೋಪಿಸಿರುವ ಹಜಾರೆಯವರು ಹಲವು ಪ್ರತಿಭಟನೆಗಳನ್ನು ನಡೆಸಿದ್ದಾರೆ.

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top