×
Home About Us Advertise With s Contact Us

ವಿಕಾಸ್ ಸ್ವರೂಪ್ ನೂತನ ವಿದೇಶಾಂಗ ವಕ್ತಾರ?

vikasನವದೆಹಲಿ: ಖ್ಯಾತ ಬರಹಗಾರ ವಿಕಾಸ್ ಸ್ವರೂಪ್ ಅವರು ವಿದೇಶಾಂಗ ಸಚಿವಾಲಯದ ವಕ್ತಾರರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಮೂಲಗಳ ಪ್ರಕಾರ ಮಾ.25ರಂದು ನರೇಂದ್ರ ಮೋದಿ ಸರ್ಕಾರ ಅವರ ನೇಮಕಾತಿ ಆದೇಶ ಹೊರಡಿಸಿದ್ದು, ಎಪ್ರಿಲ್ 18ರಂದು ಮೋದಿ ಯುರೋಪ್, ಕೆನಡಾ ಪ್ರವಾಸ ಮುಗಿಸಿ ಬಂದ ಬಳಿಕ ಅವರು ಅಧಿಕಾರವಹಿಸಿಕೊಳ್ಳುವ ಸಾಧ್ಯತೆ ಇದೆ.

ಸ್ವರೂಪ್ ಅವರು 1986 ಬ್ಯಾಚ್‌ನ ಐಎಎಸ್ ಅಧಿಕಾರಿ. ಉತ್ತರಪ್ರದೇಶದ ಅಲಹಾಬಾದ್‌ನಲ್ಲಿ ಜನಿಸಿದವರು. ಇವರು ಖ್ಯಾತ ಬರಹಗಾರರೂ ಆಗಿದ್ದಾರೆ. ಇವರ ಕೃತಿ ಆಧಾರಿತ ’ಸ್ಲಂ ಡಾಗ್ ಮಿಲಿಯನೇರ್’ ಸಿನಿಮಾಗೆ ಆಸ್ಕರ್ ಪ್ರಶಸ್ತಿ ಲಭಿಸಿದೆ.

ಪ್ರಸ್ತುತ ವಿದೇಶಾಂಗ ವಕ್ತಾರರಾಗಿರುವ ಸೈಯದ್ ಅಕ್ಬರುದ್ದೀನ್ ಅವರನ್ನು ಹೆಚ್ಚುವರಿ ಕಾರ್ಯದರ್ಶಿಯಾಗಿ ನೇಮಕ ಮಾಡುವ ಸಾಧ್ಯತೆ ಇದೆ. ಈಗಾಗಲೇ ಅವರನ್ನು ಭಾರತ-ಆಫ್ರಿಕಾ ಫೋರಮ್ ಸಮಿತ್‌ನ ಚೀಫ್ ಕೋರ್ಡಿನೇಟರ್ ಆಗಿ ನೇಮಿಸಲಾಗಿದೆ.

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top