×
Home About Us Advertise With s Contact Us

ಬರಲಿದೆ ವಿಶ್ವಬಂಟರ ಮಾಹಿತಿ ಕೋಶ

ಮಂಗಳೂರು : ವಿಶ್ವದೆಲ್ಲೆಡೆ ಇರುವ ಬಂಟ ಸಮುದಾಯದ ಜನರ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹ ಮಾಡುವ ಸಲುವಾಗಿ ವಿಶ್ವ ಬಂಟರ ಮಾಹಿತಿ ಕೋಶ ಅನಾವರಣ ಗೊಳಿಸುವ ಉದ್ದೇಶ ಇದೆ ಎಂದು ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಹೇಳಿದರು. ಬಂಟರ ಯಾನೆ ನಾಡವರ ಮಾತೃ ಸಂಘದ ವತಿಯಿಂದ ಎ.2 ರಂದು ಬಂಟ್ಸ್ ಹಾಸ್ಟೇಲಿನಲ್ಲಿ ನಡೆಯುವ `ಬಾಂಧವ್ಯ’ ಕಾರ್ಯ ಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ajeeth-kumar-rai-1

`ಬಾಂಧವ್ಯ’ ಕಾರ್ಯಕ್ರಮ ವಿಶ್ವದಾದ್ಯಂತ ಇರುವ ಬಂಟರನ್ನು ಒಗ್ಗೂಡಿಸುವ ಪ್ರಯತ್ನ. ವಿಶ್ವ ಬಂಟರ ಮಾಹಿತಿ ಕೋಶವನ್ನು ಇದೇ ವೇಳೆ ಅನಾವರಣ ಮಾಡಲಾಗುವುದು ಎಂದು ಅವರು ತಿಳಿಸಿದರು. ಪ್ರತಿ ಗ್ರಾಮದಲ್ಲಿ ಸದಸ್ಯರನ್ನು ನೇಮಕ ಮಾಡಿ ಅವರಿಗೆ ತರಬೇತಿ ನೀಡಿ ಮಾಹಿತಿ ಸಂಗ್ರಹದ ಬಗ್ಗೆ ತಿಳಿಸಲಾಗು ವುದು ಎಂದರು. ಮುಖ್ಯ ಅತಿಥಿ ಬ್ರಿಗೇಡಿಯರ್ ಐ.ಎನ್.ರೈ ಮಾತನಾಡಿ, ಬದಲಾಗಿರುವ ಆಧುನಿಕ ಯುಗದಲ್ಲಿ ಸಮುದಾಯದ ಎಲ್ಲರ ಮಾಹಿತಿ ಕಲೆ ಹಾಕಿ ಕೋಶ ರಚಿಸುವ ಅವಶ್ಯವಿದೆ ಎಂದರು. ಶ್ರೀರಾಮಕೃಷ್ಣ ಪ.ಪೂ. ಕಾಲೇಜಿನ ಪ್ರಾಂಶುಪಾಲ ಪ್ರೋ. ಭಾಸ್ಕರ ಶೆಟ್ಟಿ ಅವರನ್ನು ಈ ವೇಳೆ ಸಮ್ಮಾನಿಸಲಾಯಿತು.

ajeeth-kumar-rai

ಬಂಟ ಸಮುದಾಯದ ಮುಖಂಡರಾದ ಡಾ.ಹನ್ಸರಾಜ್ ಆಳ್ವ ಡಾ.ಕೆ.ಆರ್.ಶೆಟ್ಟಿ ಎಚ್.ಆರ್.ಶೆಟ್ಟಿ ಲಕ್ಷ್ಮೀಜಯಪಾಲ ಶೆಟ್ಟಿ ಕೆ.ಎನ್.ಆಳ್ವ ಸದಾನಂದ ಮಲ್ಲಿ ಗೋಪಾಲಕೃಷ್ಣ ಶೇಣವ, ಪೃಥ್ವಿರಾಜ್ ರೈ, ಕೆ.ಪಿ.ಶೆಟ್ಟಿ ಸಂಘದ ಉಪಾಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ ಪ್ರಧಾನ ಕಾರ್ಯದರ್ಶಿ ಮೇಘನಾಥ ಶೆಟ್ಟಿ ಖಜಾಂಚಿ ಕೆ.ಮನಮೋಹನ ಶೆಟ್ಟಿ ಜತೆ ಕಾರ್ಯದರ್ಶಿ ಕಾವು ಹೇಮನಾಥ ಶೆಟ್ಟಿ ತಾಲೂಕು ಸಮಿತಿ ಸಂಚಾಲಕ ಜಯರಾಮ ಶಾಂತ ಮೊದಲಾದವರು ಉಪಸ್ಥಿತರಿದ್ದರು. ಶರತ್ ಶೆಟ್ಟಿ ನಿರೂಪಿಸಿದರು.

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top