×
Home About Us Advertise With s Contact Us

ಮಂಗಳೂರಿನಲ್ಲಿ ಆಕಸ್ಮಿಕವಾಗಿ ಗುಂಡು ಹಾರಿ ಭದ್ರತಾ ಸಿಬ್ಬಂದಿ ಸಾವು

ಮಂಗಳೂರು: ನಗರದ ಪಿವಿಎಸ್ ವೃತ್ತದ ಬಳಿ ಕೋಟಕ್ ಬ್ಯಾಂಕಿನ ಭದ್ರತಾ ಸಿಬ್ಬಂದಿಯೊಬ್ಬರು ಆಕಸ್ಮಿಕವಾಗಿ ಗುಂಡು ತಗುಲಿ ಸಾವನ್ನಪ್ಪಿದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.

IMG-20150326-WA0010-(1)

ಮೃತ ಸಿಬ್ಬಂದಿಯನ್ನು ತಮ್ಮಯ್ಯ(55) ಎಂದು ಗುರುತಿಸಲಾಗಿದ್ದು, ಮೂಲತ: ಮಡಿಕೇರಿಯವರಾಗಿದ್ದು ಕಳೆದ 11 ವರ್ಷಗಳಿಂದ ಇವರು ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

20150326_132713

ಇಂದು ಬ್ಯಾಂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಅವರ ಬಳಿ ಇದ್ದ ಪರವಾನಗಿ ಹೊಂದಿದ್ದ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿದೆ. ಗುಂಡು ಕತ್ತಿನ ಮೂಲಕ ಹಾರಿ ತಲೆಯನ್ನು ಸೀಳಿದೆ. ತಕ್ಷಣವೇ ಅವರ ಪ್ರಾಣಪಕ್ಷಿ ಹಾರಿದೆ ಎಂದು ಮೂಲಗಳು ತಿಳಿಸಿವೆ.

ಕದ್ರಿ ಠಾಣಾ ಪೊಲೀಸರು ಪ್ರಕರಣದ ಬಗ್ಗೆ ತನಿಖೆ ಆರಂಭಿಸುತ್ತಿದ್ದಾರೆ. ಜಿಲ್ಲಾ ಎಸ್ಸ್. ಪಿ. ಶರಣ್ಣಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top