×
Home About Us Advertise With s Contact Us

ಸರ್ಕಾರಿ ಉದ್ಯೋಗಿಗಳ ಕೆಟ್ಟ ಚಟಕ್ಕೆ ಕೇರಳ ಸರ್ಕಾರ ಬರೆ

drinkತಿರುವನಂತಪುರಂ: ಕೇರಳದಲ್ಲಿ ಇನ್ನು ಮುಂದೆ ಸರ್ಕಾರಿ ಉದ್ಯೋಗಿಗಳು ಕಛೇರಿ ಅವಧಿಯಲ್ಲಿ ಸಿಗರೇಟು, ಗುಟ್ಕಾ ಸೇವನೆ ಅಥವಾ ಮದ್ಯ ಸೇರಿದಂತೆ ಇನ್ನಿತರ ಮಾದಕ ವಸ್ತುಗಳ ಸೇವನೆ ನಡೆಸಿದರೆ ಅವರ ವಿರುದ್ಧ ಕಠಿಣಕ್ರಮಕೈಗೊಳ್ಳಲು ಅಲ್ಲಿನ ಸರ್ಕಾರ ಮುಂದಾಗಿದೆ.

ಶಿಕ್ಷಣ ಸಂಸ್ಥೆಗಳಲ್ಲೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಈ ರೀತಿಯ ಚಟುವಟಿಕೆಯಲ್ಲಿ ತೊಡಗಿದ್ದರೆ ಅವರ ವಿರುದ್ಧ ಕಠಿಣಕ್ರಮಕೈಗೊಳ್ಳುವುದಾಗಿ ಸರ್ಕಾರ ಹೇಳಿದೆ.

ಮಾದಕ ವ್ಯಸನದಲ್ಲಿ ಉದ್ಯೋಗಿಗಳು ತೊಡಗಿದ್ದರೆ ಅವರ ವಿರುದ್ಧ ಮೇಲಾಧಿಕಾರಿಗಳು ಕ್ರಮಕೈಗೊಳ್ಳಬೇಕು. ಒಂದು ವೇಳೆ ಕ್ರಮಕೈಗೊಳ್ಳದೇ ಹೋದರೆ ಮೇಲಾಧಿಕಾರಿಗಳಿಗೆ ದಂಡ ವಿಧಿಸಲಾಗುತ್ತದೆ.

ಕುಡಿದು ಚಾಲನೆ ಮಾಡುವ ಚಾಲಕರನ್ನು ಕೂಡ ತಕ್ಷಣ ಸಸ್ಪೆಂಡ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಅದೇನೆಯಿರಲಿ ದುರಾಭ್ಯಾಸಗಳಿಗೆ ದಾಸರಾಗಿರುವ ಸರ್ಕಾರಿ ಉದ್ಯೋಗಿಗಳಿಗೆ ಕೇರಳದಲ್ಲಿನ್ನು ಉಳಿಗಾಲವಿಲ್ಲ.

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top