News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಡಿಜಿಟಲ್ ಪಾವತಿಗಳಿಗೆ ‘ಭೀಮ್’ ಮೊಬೈಲ್ ಆ್ಯಪ್, ಲಕ್ಕಿ ಗ್ರಾಹಕ್ ಯೋಜನೆ ಬಿಡುಗಡೆ

bhim
ನವದೆಹಲಿ: ದೇಶದ ನಾಗರಿಕರಿಗೆ ಡಿಜಿಟಲ್ ಪಾವತಿ ಸುಲಭಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರು ‘ಭೀಮ್’ ಮೊಬೈಲ್ ಅಪ್ಲಿಕೇಶನ್‌ಗೆ ಶುಕ್ರವಾರ ಚಾಲನೆ ನೀಡಿದ್ದಾರೆ.

ದೆಹಲಿಯ ಟಲ್ಕಟೋರ ಕ್ರೀಡಾಂಗಣದಲ್ಲಿ ಡಿಜಿ ಧನ್ ಮೇಳ ಕಾರ್ಯಕ್ರಮದ ವೇಳೆ ಪ್ರಧಾನಿ ಮೋದಿ ಅವರು ಈ ಮೊಬೈಲ್ ಆ್ಯಪ್‌ಗೆ ಚಾಲನೆ ನೀಡಿದ್ದು, ‘ಭೀಮ್’ ಹೆಸರಿನ ಈ ಮೊಬೈಲ್ ಆ್ಯಪ್ ಇ-ವ್ಯವಹಾರಗಳನ್ನು ಸುಲಭಗೊಳಿಸಲು ಸಹಕಾರಿಯಾಗಲಿದೆ. ಭಾರತ್ ಇಂಟರ್‌ಫೇಸ್ ಫಾರ್ ಮನಿ (ಭೀಮ್) ಇ-ವ್ಯಾಲೆಟ್‌ನ್ನು ಡಾ. ಬಿ.ಆರ್ ಅಂಬೇಡ್ಕರ್ ಅವರ ಹೆಸರಲ್ಲಿ ಬಿಡುಗಡೆ ಮಾಡಲಾಗಿದೆ. ಈ ಆ್ಯಪ್ ದೇಶದ ಕಡು ಬಡವರನ್ನು ಸಬಲರನ್ನಾಗಿಸಲಿದೆ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ಮೋದಿ ಅವರು ‘ಲಕ್ಕಿ ಗ್ರಾಹಕ್ ಯೋಜನೆ’ ಮತ್ತು ‘ಡಿಜಿ ಧನ್ ವ್ಯಾಪಾರ್ ಯೋಜನೆ’ಯ ಲಕ್ಕಿ ಡ್ರಾ ಘೋಷಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರದಾನಿ ಮೋದಿ ಅವರು, ನಗದು ರಹಿತ ವ್ಯವಹಾರ ನಡೆಸಿದ ಗ್ರಾಹಕರಿಗೆ 1 ಕೋಟಿ ರೂ. ವರೆಗಿನ ಬಹುಮಾನ ನೀಡಲಾಗುವುದು. 100 ದಿನಗಳ ಕಾಲ ಈ ಯೋಜನೆ ಜಾರಿಯಲ್ಲಿರಲಿದ್ದು, ಎಪ್ರಿಲ್ 14, 2017ರಂದು 1 ಕೋಟಿ ರೂ. ಬಹುಮಾನ ಘೋಷಿಸಲಾಗುವುದು. ವಿಜೇತರ ಹೆಸರನ್ನು https://digidhan.mygov.in/ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.

ಭೀಮ್ ಆ್ಯಪ್‌ನ್ನು ಆಧುನಿಕ ರೀತಿಯಲ್ಲಿ ಅಭಿವೃದ್ಧಿಗೊಳಿಸಲಾಗಿದ್ದು, ಗ್ರಾಹಕರು ಪಾವತಿ ಮಾಡಲು ಕೇವಲ ಹೆಬ್ಬೆಟ್ಟಿನ ಗುರುತು/ಬೆರಳಚ್ಚಿನ ಅವಶ್ಯಕತೆ ಇದೆ. ಕೊನೆಗೂ ಜನರು ಇಂಟರ್‌ನೆಟ್, ಸ್ಮಾರ್ಟ್‌ಫೋನ್‌ಗಳ ಮೇಲೆ ಅವಲಂಬಿಸುವ ಅಗತ್ಯವಿರುವುದಿಲ್ಲ. ನಿಮ್ಮ ಹೆಬ್ಬೆರಳೇ ನಿಮ್ಮ ಬ್ಯಾಂಕ್ ಆಗಿದೆ ಎಂದು ಹೇಳಿದ್ದಾರೆ.

ಡಿಜಿಟಲ್ ಪಾವತಿ ಮೂಲಕ 50 ರೂ.ದಿಂದ 3000 ರೂ. ಒಳಗಿನ ವ್ಯವಹಾರ ನಡೆಸಿದವರಿಗೆ ಬಹುಮಾನ ವಿತರಿಸಲಾಗುವುದು.

ಭೀಮ್ ಮೊಬೈಲ್ ಆ್ಯಪ್ ಆಂಡ್ರಾಯ್ಡ್ ಬಳಕೆದಾರರಿಗೆ ಡೌನ್‌ಲೋಡ್ ಮಾಡಲು ಲಭ್ಯವಿರಲಿದೆ ಎಂದು ನೀತಿ ಆಯೋಗ ಟ್ವೀಟ್ ಮಾಡಿದೆ.