ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಡಿ.5ರಂದು ವಿಧಿವಶರಾದ ನಂತರ ಅಮ್ಮ ಅವರ ಬೆಂಬಲಿಗರು ಸಾಮೂಹಿಕ ಮುಂಡನ, ಅಮ್ಮ ಅವರ ಮುಖವುಳ್ಳ ಹಚ್ಚು, ಮುಂತಾದ ಅನನ್ಯ ರೀತಿಯಲ್ಲಿ ಗೌರವಾರ್ಪಣೆ ಸಲ್ಲಿಸುತ್ತಿದ್ದಾರೆ.
ಅಮ್ಮ ಅವರ ಅಭಿಮಾನಿಗಳ ಒಂದು ಗುಂಪು 68 ಕೆಜಿ ಇಡ್ಲಿ ಬಳಸಿ ಜಯಲಲಿತಾ ಅವರ ಮೂಖ ರಚಿಸಿ ಈ ಮೆಗಾ ಇಡ್ಲಿಯನ್ನು ಅಮ್ಮ ಅವರ ಸಮಾಧಿ ಮಾಡಲಾಗಿದ್ದ ಚೆನ್ನೈಯ ಪ್ರಸಿದ್ಧ ಮರೀನಾ ಬೀಚ್ನಲ್ಲಿ ಪ್ರದರ್ಶಿಸಿದ್ದಾರೆ.
ಈ ದೈತ್ಯಾಕಾರದ ಇಡ್ಲಿಯ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗಿದ್ದು, ಚಿತ್ರಗಳಿಗೆ ಟ್ವಿಟರ್ನಲ್ಲಿ ವ್ಯಾಪಕವಾಗಿ ಮಿಶ್ರ ಪ್ರತಿಕ್ರಿಯೆ ದೊರೆತಿದೆ.
ಈ ಇಡ್ಲಿಯು ತಮಿಳುನಾಡಿನಾದ್ಯಂತ ಜನರಿಗೆ ಸಬ್ಸಿಡಿ ದರದಲ್ಲಿ ಉಪಹಾರ ಒದಗಿಸುವ ಜಯಲಲಿತಾ ಅವರ ಅಮ್ಮ ಬ್ರ್ಯಾಂಡ್ನ ಕ್ಯಾಂಟೀನ್ಗಳಿಗೆ ಸಮಾನವಾಗಿದೆ ಎನ್ನಲಾಗಿದೆ.
ತಮಿಳುನಾಡಿನ ನೆಚ್ಚಿನ ಅಮ್ಮ (ತಾಯಿ) ಜೆ. ಜಯಲಲಿತಾ ಅವರನ್ನು ಚೆನ್ನೈಯ ಪ್ರಸಿದ್ಧ ಮರೀನಾ ಬೀಚ್ನಲ್ಲಿ ಡಿ.6ರಂದು ಸಮಾಧಿ ಮಾಡಲಾಗಿದ್ದು, ಲಕ್ಷಾಂತರ ಜನರು ಈ ದುಃಖದ ಶಾಂತಿಯುತ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.