ನವದೆಹಲಿ: ಭಾರತೀಯ ರೈಲ್ವೆಯು ಆರ್ಎಸ್ (ರದ್ದತಿ ವಿರುದ್ಧ ಮೀಸಲಾತಿ ಟಿಕೆಟ್) ಬರ್ತ್ಗಳ ಟಿಕೆಟ್ ಬುಕಿಂಗ್ ಹೆಚ್ಚಿಸಲು ನಿರ್ಧರಿಸಿದೆ.
ರೈಲ್ವೆ ಇಲಾಖೆಯ ಈ ನಡೆಯಿಂದ ಅಧಿಕ ಸಂಖ್ಯೆಯಲ್ಲಿ ಜನರು ರೈಲು ಪ್ರಯಾಣ ನಡೆಸಲು ಅವಕಾಶ ಪಡೆಯಲಿದ್ದಾರೆ. ರೈಲುಗಳಲ್ಲಿ ವರ್ಧಿತ ಆರ್ಎಸಿ ಸೌಕರ್ಯ ಲಭ್ಯವಿರಲಿದ್ದು, ಜನವರಿ 16, 2017ರಿಂದ ಇದರ ಟಿಕೆಟ್ ಬುಕಿಂಗ್ ಆರಂಭವಾಗಲಿವೆ.
ಕೆಲವು ಪ್ರಧಾನ ರೈಲುಗಳಾದ ರಾಜಧಾನಿ, ಶತಾಬ್ದಿ ಮತ್ತು ದುರಂತೋ ಎಕ್ಸ್ಪ್ರೆಸ್ ರೈಲುಗಳಲ್ಲಿ ಇರುವ ಖಾಲಿ ಸೀಟುಗಳನ್ನು ತುಂಬಲು ಭಾರತೀಯ ರೈಲ್ವೆ ಕೊನೆಯ ಕ್ಷಣದಲ್ಲಿ ಬುಕಿಂಗ್ ಮಾಡುವ ಪ್ರಯಾಣಿಕರಿಗಾಗಿ ದರಗಳಲ್ಲಿ ಬದಲಾವಣೆ ಮಾಡಿದೆ. ಈ ಬದಲಾದ ದರಗಳನ್ನು ಡಿ.20ರಿಂದ ಮುಂದಿನ ಆರು ತಿಂಗಳ ಕಾಲ ಪ್ರಾಯೋಗಿಕ ಆಧಾರದಲ್ಲಿ ಅಳವಡಿಸಲಾಗುವುದು ಎಂದು ಭಾರತೀಯ ರೈಲ್ವೆ ತಿಳಿಸಿದೆ.
ಭಾರತೀಯ ರೈಲ್ವೆಯ ಪ್ರಕಟಣೆ ಪ್ರಕಾರ, ಮೀಸಲಾತಿ ಪಟ್ಟಿ ಅಂತಿಮಗೊಂಡ ಬಳಿಕ ಪ್ರಧಾನ ರೈಲುಗಳ ಮೀಸಲು ಟಿಕೆಟ್ಗಳ ಹೆಚ್ಚುವರಿ ದರಗಳು ಈ ಹಿಂದಿನ ಶೇ.50ರಿಂದ ಶೇ.40ಕ್ಕೆ ಇಳಿಕೆಯಾಗುವ ಸಾಧ್ಯತೆ ಇದೆ.
ಇನ್ನು ಪಟ್ಟಿ ಅಂತಿಮಗೊಂಡ ಬಳಿಕ ರೈಲ್ವೆ ಇಲಾಖೆ ನಿಗದಿಪಡಿಸಿದ ಮೀಸಲಾತಿ ಸೀಟುಗಳ ನಂತರದ ಖಾಲಿ ಸೀಟುಗಳ ಮೇಲಿನ ಮೂಲ ದರಕ್ಕಿಂತ ಹೆಚ್ಚುವರಿ ದರಗಳ ಪ್ರಮಾಣ ಈ ಹಿಂದಿನ 1.5 ಪಟ್ಟು ಹೆಚ್ಚದಿಂದ 1.4ಕ್ಕೆ ಇಳಿಕೆ ಆಗಲಿದೆ.
ಭಾರತೀಯ ರೈಲ್ವೆಯ ಪ್ರಕಟಣೆ ಪ್ರಕಾರ, ಮೀಸಲಾತಿ ಪಟ್ಟಿ ಅಂತಿಮಗೊಂಡ ಬಳಿಕ ಪ್ರಧಾನ ರೈಲುಗಳ ಮೀಸಲು ಟಿಕೆಟ್ಗಳ ಹೆಚ್ಚುವರಿ ದರಗಳು ಟಿಕೆಟ್ ಲಭ್ಯತೆ ಆಧಾರದಲ್ಲಿ ಈ ಹಿಂದಿನ ಶೇ.50ರಿಂದ ಶೇ.40ಕ್ಕೆ ಇಳಿಕೆಯಾಗುವ ಸಾಧ್ಯತೆ ಇದೆ.
ಫ್ಲೆಕ್ಸಿ-ದರಗಳು ಶೇ.10ರಷ್ಟು ಟಿಕೆಟ್ ಮಾರಾಟದ ಮೇಲೆ ಶೇ.10ರಷ್ಟು ಏರಿಕೆಯಾಗಲಿದ್ದು, ಇದು 1.4 ಪಟ್ಟು ಹೆಚ್ಚಲಿದೆ ಎಂದು ಪ್ರಕಟಣೆ ತಿಳಿಸಿದೆ.
ರೈಲ್ವೆಯು ಪ್ರಥಮ ದರ್ಜೆ ಎಸಿ ಮತ್ತು ಎಕ್ಸೆಕ್ಯೂಟಿವ್ ಕ್ಲಾಸ್ಗಳ ಟಿಕೆಟ್ ಬುಕಿಂಗ್ ದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.