ನವದೆಹಲಿ: ಮುಖೇಶ್ ಅಂಬಾನಿ ಅವರ ರಿಲಯನ್ಸ್ ಜಿಯೋ 4G ಅನಿಯಮಿತ ವಾಯ್ಸ್ ಮತ್ತು ವೀಡಿಯೋ ಕಾಲ್ನ ವೆಲ್ಕಮ್ ಆಫರ್ ಹಾಗೂ ಏರ್ಟೆಲ್ ವಿವಿಧ ಆಫರ್ಗಳ ನಂತರ ಬಿಎಸ್ಎನ್ಎಲ್ ಹೊಸ ರೂ.99 ಆಫರ್ ಘೋಷಿಸಿದೆ.
ಬಿಎಸ್ಎನ್ಎಲ್ ತನ್ನ ಪ್ರೀಪೇಯ್ಡ್ ಗ್ರಾಹಕರಿಗೆ ಕೇವಲ ರೂ. 99ರ 28 ದಿನಗಳ ವ್ಯಾಲಿಡಿಟಿಯ ಅನಿಯಮಿತ ಸ್ಥಳೀಯ ಮತ್ತು ಎಸ್ಟಿಡಿ ಕರೆಗಳ ಆಫರ್ ಘೋಷಿಸಿದೆ.
ಬಿಎಸ್ಎನ್ಎಲ್ ಗ್ರಾಹಕರು ಬಿಎಸ್ಎನ್ಎಲ್ನಿಂದ ಬಿಎಸ್ಎನ್ಎಲ್ಗೆ ಅನಿಯಮಿತ ಕರೆಯೊಂದಿಗೆ 300 MB ಡಾಟಾ ಪಡೆಯಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಇದು ಕೋಲ್ಕತಾ ಟಿಡಿ, ಅಸ್ಸಾಂ, ಜಾರ್ಖಂಡ್, ಮಧ್ಯ ಪ್ರದೇಶ, ಪಶ್ಚಿಮ ಬಂಗಾಳ, ರಾಜಸ್ಥಾನ, ಮಹಾರಾಷ್ಟ್ರ, ಗುಜರಾತ್, ಛತ್ತೀಸ್ಗಢ, ಬಿಹಾರ್ಗಳ ನೆಟ್ವರ್ಕ್ಗಳಿಗೆ ಈ ದರಗಳು ಅನ್ವಯವಾಗಲಿದೆ. ಇತರ ವಲಯಗಳಲ್ಲಿ ಈ ದರಗಳು ರೂ. 119ರಿಂದ 149ರ ವರೆಗೆ ಬದಲಾಗಲಿವೆ ಎಂದು ಕಂಪೆನಿ ತಿಳಿಸಿದೆ.
ಬಿಎಸ್ಎನ್ಎಲ್ ಹೊಸ ಎಸ್ಟಿವಿ ಕಾಂಬೋ ಆಫರ್ ಪರಿಚಯಿಸಿದ್ದು, ಇದು ರೂ.339ರ ಬಿಎಸ್ಎನ್ಎಲ್ನಿಂದ ಇತರ ನೆಟ್ವರ್ಕ್ಗಳಿಗೆ ಅನಿಯಮಿತ ಸ್ಥಳೀಯ ಮತ್ತು ಎಸ್ಟಿಡಿ ಕರೆಗಳ ಆಫರ್ ಆಗಿದೆ. ಇದು 1 ಜಿಬಿ ಡಾಟಾ ಒಳಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.