ನವದೆಹಲಿ : ಕಪ್ಪು ಹಣ ಬಹಿರಂಗಪಡಿಲು ಮೋದಿ ಸರ್ಕಾರದಿಂದ ಹೊಸ ಯೋಜನೆ ಪ್ರಾರಂಭವಾಗಿದೆ. ಸಾರ್ವಜನಿಕರು ಕಪ್ಪು ಹಣ ಇರುವವರ ಬಗ್ಗೆ ಮಾಹಿತಿಯಿದ್ದಲ್ಲಿ ಅದನ್ನು ಸರ್ಕಾರಕ್ಕೆ ಇ-ಮೇಲ್ ಕಳುಹಿಸುವ ಮುಖಾಂತರ ಕಪ್ಪು ಹಣ ಬಹಿರಂಗಪಡಿಸುವಲ್ಲಿ ಸಹಾಯ ಮಾಡಬಹುದು. ನಾಳೆಯಿಂದ ಈ ಯೋಜನೆ ಪ್ರಾರಂಭಗೊಳ್ಳಲಿದೆ ಎನ್ನಲಾಗಿದೆ.
ಈ ಕುರಿತು ಕೇಂದ್ರ ಹಣಕಾಸು ಸಚಿವಾಲಯ ಟ್ವೀಟ್ ಮಾಡಿದೆ.
People can directly contact the dept with info about possible conversion of black money at email address:
blackmoneyinfo@incometax.gov.in— Ministry of Finance (@FinMinIndia) December 16, 2016
ತೆರಿಗೆ ಪಾವತಿಸದೆ ಇರುವವರು ಮಾರ್ಚ್ 2017 ರೊಳಗೆ ತಮ್ಮೆಲ್ಲಾ ಬಾಕಿ ತೆರಿಗೆಯನ್ನು ಕೇಂದ್ರ ಹಣಕಾಸು ಮಂತ್ರಿ ಅರುಣ್ ಜೇಟ್ಲಿ ಅವರು ಕಳೆದ ತಿಂಗಳು ಬಿಡುಗಡೆಗೊಳಿಸಿದ ಯೋಜನೆಯಡಿ ಪಾವತಿಸಲು ಅವಕಾಶವಿದೆ ಎಂದು ಸರ್ಕಾರ ಶುಕ್ರವಾರ ಹೇಳಿದೆ.
ಈ ಯೋಜನೆಯಡಿಯಲ್ಲಿ ತೆರಿಗೆದಾರರು ಘೋಷಿಸಿಕೊಳ್ಳದೆ ವಿಫಲರಾದಲ್ಲಿ 50% ತೆರಿಗೆ ದಂಡವನ್ನು ಅಘೋಷಿತ ಆದಾಯದ ಮೇಲೆ ಹೇರಲಾಗುವುದು ಎಂದು ವಿತ್ತ ಸಚಿವಾಲಯದ ಆದಾಯ ವಿಭಾಗದ ಕಾರ್ಯದರ್ಶಿ ಹಶ್ಮುಖ್ ಆಧಿಯಾ ಹೇಳಿದ್ದಾರೆ.
ಕಪ್ಪು ಹಣ ಕೂಡಿಟ್ಟುಕೊಂಡಿರುವವರ ಬಗ್ಗೆ ಸಾರ್ವಜನಿಕರು ಕೂಡಾ ಸರ್ಕಾರಕ್ಕೆ ಮಾಹಿತಿ ನೀಡಬಹುದಾಗಿದ್ದು, ಖಚಿತ ಮಾಹಿತಿ ಅಥವಾ ಅನುಮಾನ ಬಂದಲ್ಲಿ ಅವರ ಮಾಹಿತಿಯನ್ನು blackmoneyinfo@incometax.gov.in ಇ-ಮೇಲ್ಗೆ ಕಳುಹಿಸಬಹುದು. ಕಪ್ಪುಹಣವನ್ನು ಬಿಳಿಯಾಗಿಸುವ ಯಾವುದೇ ಮಾಹಿತಿಯಿದ್ದರೂ ಅದನ್ನು ಇ-ಮೇಲ್ಗೆ ಕಳುಹಿಸಬಹುದು. ಮಾಹಿತಿ ಆಧರಿಸಿ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳುವರು. ಇ-ಮೇಲ್ ಕಳುಹಿಸಿದವರ ಮಾಹಿತಿಯನ್ನು ಗುಪ್ತವಾಗಿ ಇಡಲಾಗುವುದು ಎಂದು ಹಶ್ಮುಖ್ ಆಧಿಯಾ ತಿಳಿಸಿದ್ದಾರೆ.
ಕಪ್ಪು ಹಣ ಬಹಿರಂಗಕ್ಕೆ ಕೇಂದ್ರ ಸರ್ಕಾರದ ವತಿಯಿಂದ ಇದೊಂದು ಹೊಸ ಯೋಜನೆಯಾಗಿದ್ದು, ಈ ಯೋಜನೆಯಿಂದ ಬಹಳಷ್ಟು ಕಪ್ಪು ಹಣ ಹೊಂದಿರುವವರ ಕುರಿತು ಮಾಹಿತಿಗಳು ಹೊರಬೀಳುವ ಸಾಧ್ಯತೆ ಇವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.