ವಾಷಿಂಗ್ಟನ್: ಜಾಗತಿಕವಾಗಿ ಆ್ಯಪಲ್ ಕಚೇರಿ ಎಂದು ಹೆಸರುವಾಸಿಯಾಗಿರುವ ಕ್ಯಾಲಿಫೋರ್ನಿಯಾದ ಕ್ಯೂಪರ್ಟಿನೊ ನಗರದ ಮೇಯರ್ ಆಗಿ ಮೊದಲ ಬಾರಿ ಭಾರತೀಯ ಅಮೇರಿಕನ್ ಆಯ್ಕೆಯಾಗಿದ್ದಾರೆ.
ಗಣಿತ ಶಿಕ್ಷಕಿ, ವಾಣಿಜ್ಯ ಬ್ಯಾಂಕ್ ಅಧಿಕಾರಿಯಾಗಿ ಹಾಗೂ ಲಾಭರಹಿತ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸವಿತಾ ವೈದ್ಯನಾಥನ್ ಅವರು ಸಮಾರಂಭವೊಂದರಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಇದು ನನ್ನ ಜೀವನದ ಬಗಳ ಸಂತಸದ ಕ್ಷಣವಾಗಿದೆ ಎಂದು ಕ್ಯಾಪರ್ಟಿನೊ ಸಮುದಾಯ ಹಾಲ್ನಲ್ಲಿ ನಡೆದ ಸಮಾರಂಭದಲ್ಲಿ ವೈದ್ಯನಾಥನ್ ಹೇಳಿರುವುದಾಗಿ ದ ಮರ್ಕ್ಯೂರಿ ನ್ಯೂಸ್ ವರದಿ ಮಾಡಿದೆ.
ಫೋರ್ಬ್ಸ್ ಪ್ರಕಾರ ಸವಿತಾ ವೈದ್ಯನಾಥನ್ ಮೊದಲ ಭಾರತೀಯ- ಅಮೇರಿಕ್ ಮೇಯರ್ ಆಗಿದ್ದು, ಕ್ಯಾಪರ್ಟಿನೊ ಉನ್ನತ ಶ್ರೇಣಿಯ ಸ್ಥಳೀಯ ಸಾರ್ವಜನಿಕ ಶಾಲೆಗಳನ್ನು ಹೊಂದಿದ ದೇಶದ ಅತ್ಯಂತ ಸುಶಿಕ್ಷಿತ ಸಣ್ಣ ಪಟ್ಟಣಗಳಲ್ಲೊಂದಾಗಿದೆ ಎಂದು ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.