ನವದೆಹಲಿ : ವಿವರ ನೀಡದೆ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವವರಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಆರ್ಬಿಐ ಕೆಲ ನಿರ್ದಿಷ್ಟ ಬ್ಯಾಂಕ್ ಖಾತೆಗಳಿಗೆ ನಿರ್ಬಂಧ ವಿಧಿಸಿದೆ.
500 ರೂ. ಹಾಗೂ 1000 ರೂ. ನೋಟು ನಿಷೇಧದ ಬಳಿಕ ನವೆಂಬರ್ 9 ರ ನಂತರ 2 ಲಕ್ಷ ರೂ. ಗಿಂತಲೂ ಹೆಚ್ಚಿನ ಹಣವನ್ನು ಬ್ಯಾಂಕ್ ಖಾತೆಗಳಿಗೆ ಡೆಪಾಸಿಟ್ ಮಾಡಿರುವ ಬ್ಯಾಂಕ್ ಖಾತೆಗಳಲ್ಲಿ 5 ಲಕ್ಷ ರೂ. ಗಿಂತಲೂ ಹೆಚ್ಚಿನ ಹಣ ಇದ್ದಲ್ಲಿ, ಅಂಥಹ ಖಾತೆಗಳಿಗೆ ಕೆಲವು ನಿರ್ಬಂಧಗಳನ್ನು ಹಾಕಲಾಗಿದೆ.
5 ಲಕ್ಷ ರೂ. ಗಿಂತಲೂ ಹೆಚ್ಚು ಹಣವನ್ನು ಹೊಂದಿರುವ ಖಾತೆದಾರರು ಪ್ಯಾನ್ ನಂಬರ್ ಅಥವಾ ಫಾರ್ಮ್ 60 (ಪ್ಯಾನ್ ನಂಬರ್ ಇಲ್ಲದಿರುವವರು) ಯನ್ನು ನೀಡಿದರೆ ಮಾತ್ರ ಹಣ ತೆಗೆಯಬಹುದು. ಇಲ್ಲದಿದ್ದಲ್ಲಿ ಹಣ ವರ್ಗಾವಣೆಯನ್ನೂ ಮಾಡುವಂತಿಲ್ಲ.
ಒಂದೊಮ್ಮೆ ಸಣ್ಣ ಖಾತೆಗಳಲ್ಲಿ ವಾರ್ಷಿಕ ಠೇವಣಿ ಮಿತಿ 1 ಲಕ್ಷ ರೂ. ದಾಟಿದರೂ ಮಾಸಿಕ ಹಿಂಪಡೆತ ಮಿತಿ 10,000 ರೂ. ಇರಬೇಕು ಎಂದು ಹೇಳಿದೆ.
ಕೆವೈಸಿ (know your customer) ಚೆಕ್ ಮಾಡಲೇಬೇಕು ಎಂಬುದನ್ನೂ ಕಡ್ಡಾಯವಾಗಿ ಹೇಳಿದೆ.
ನೋಟು ನಿಷೇಧದ ನಂತರ ಕೆಲ ಖಾತೆಗಳಲ್ಲಿ ಲೆಕ್ಕಾಚಾರವಿಲ್ಲದೆ ಹಣ ಡೆಪಾಸಿಟ್ ಆಗುತ್ತಿರುವ ಹಿನ್ನಲೆಯಲ್ಲಿ ಈ ನಿಬಂಧನೆಗಳನ್ನು ಆರ್ಬಿಐ ಹಾಕಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.