ಚೆನ್ನೈ: ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ನಿಧನದ ನಂತರ ಪಕ್ಷದ ಮುಖ್ಯಸ್ಥರ ನೇಮಕದ ಬಗ್ಗೆ ನಡೆಯುತ್ತಿದ್ದ ಗೊಂದಲದ ಸಮಸ್ಯೆ ಈಗ ಅಂತ್ಯಗೊಂಡಿದೆ. ಜಯಲಲಿತಾ ಆಪ್ತೆಯಾಗಿದ್ದ ಶಶಿಕಲಾ ನಟರಾಜನ್ ಅವರನ್ನು ಎಐಎಡಿಎಮ್ಕೆ ಪಕ್ಷದ ಮುಖ್ಯ ಕಾರ್ಯದರ್ಶಿ ಎಂದು ಅಧಿಕೃತವಾಗಿ ಪಕ್ಷ ಘೋಷಿಸಿದೆ.
54 ವರ್ಷದ ಶಶಿಕಲಾ ನಟರಾಜನ್ ಪಕ್ಷದಲ್ಲಿ ಯಾವುದೇ ಸ್ಥಾನ ಹೊಂದಿಲ್ಲ. ಅವರನ್ನು ಸ್ಥಾನದಲ್ಲಿರಿಸಲು ನಿಯಮಗಳ ತಿದ್ದುಪಡಿ ಮಾಡಲಾಗುವುದು ಎಂದು ಎಐಎಡಿಎಮ್ಕೆ ವಕ್ತಾರ ಪೊನ್ನೈನ್ ತಿಳಿಸಿದ್ದಾರೆ. ಈ ನಿರ್ಧಾರವು ಇಡೀ ಪಕ್ಷದ ಬಯಕೆಯಾಗಿದೆ, ಹಾಗೂ ಶಶಿಕಲಾ ಅವರು ಅಮ್ಮ(ಜಯಲಲಿತಾ) ಅವರ ಆತ್ಮಸಾಕ್ಷಿಯಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಪೊನ್ನೈನ್ ಹೇಳಿದ್ದಾರೆ.
ಜಯಲಲಿತಾ ಅವರಿಗೆ ಅಪಾರ ಬೆಂಬಲಿಗರಿದ್ದು, ಅವರನ್ನು ಪ್ರೀತಿಯಿಂದ, ಭಕ್ತಿಯಿಂದ ಕಾಣುತ್ತಿದ್ದ ಕಾರಣ ಜನರು ಅವರನ್ನು ಅಮ್ಮ ಎಂದು ಕರೆಯುತ್ತಿದ್ದರು. ಜಯಲಲಿತಾ ಡಿಸೆಂಬರ್ 5 ರಂದು ಭೀಕರ ಹೃದಯಾಘಾತದಿಂದ ನಿಧನ ಹೊಂದಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.