ಸ್ಯಾನ್ ಫ್ರಾನ್ಸಿಸ್ಕೋ: ಯಾಹೂ ಮೇಲ್ನ ಒಟ್ಟು ಬಳಕೆದಾರರಲ್ಲಿ ಒಂದು ಬಿಲಿಯನ್ಗಿಂತಲೂ ಹೆಚ್ಚು ಬಳಕೆದಾರರ ಖಾತೆಗಳು ಹ್ಯಾಕ್ ಆಗಿರುವುದಾಗಿ ಸಂಸ್ಥೆ ಹೇಳಿಕೊಂಡಿದೆ. ಇದು ಇತಿಹಾಸದಲ್ಲಿಯೇ ಅತೀ ದೊಡ್ಡ ಭದ್ರತೆಯ ಉಲ್ಲಂಘನೆಯಾಗಿದ್ದು, ಭದ್ರತಾ ಲೋಪ ವಿಚಾರದಲ್ಲಿ ಕಂಪನಿ ತನ್ನ ಸ್ವಂತ ದಾಖಲೆಯನ್ನು ಮುರಿದಿದೆ.
ಒಂದು ವರ್ಷದ ಮೊದಲೇ ಆಗಿದ್ದ ಪ್ರತ್ಯೇಕ ಹ್ಯಾಕ್ನ್ನು ಯಾಹೂ ಮೂರು ತಿಂಗಳ ಹಿಂದೆ ಹೇಳಿಕೊಂಡಿತ್ತು. ಆ ಉಲ್ಲಂಘನೆಯು ಕನಿಷ್ಟಪಕ್ಷ 500 ಮಿಲಿಯನ್ ಬಳಕೆದಾರರ ಖಾತೆಗಳ ಮೇಲೆ ಪರಿಣಾಮ ಬೀರಿತ್ತು, ಇದು ಇತ್ತೀಚಿನವರೆಗೆ ಬಹಿರಂಗವಾದ ಅತ್ಯಂತ ದೂರಗಾಮಿ ಹ್ಯಾಕ್ ಆಗಿತ್ತು.
ಗಾರ್ಟ್ನರ್ ಇಂಕ್. ಭದ್ರತಾ ತಜ್ಞ ಅವಿವ್ಹಾ ಲಿಟಾನ್ ’ಇದು ಆಘಾತಕಾರಿ ಸುದ್ದಿಯಾಗಿದೆ’ ಎಂದು ಪ್ರತಿಕ್ರಿಸಿದ್ದಾರೆ.
ಈ ಎರಡೂ ಅಚಾತುರ್ಯಗಳು ಯಾಹೂ ಸಿಇಓ ಮರಿಸ್ಸಾ ಮೇಯರ್ ಆಡಳಿತದಲ್ಲಿ ಸಂಭವಿಸಿದೆ. ಒಮ್ಮೆ ಮೆಚ್ಚುಗೆಯ ನಾಯಕರಾಗಿದ್ದ ಅವರು, ಸಂಸ್ಥೆಗೆ ಸೇರಿ ನಾಲ್ಕು ವರ್ಷಗಳಾದರೂ ಕಂಪನಿಯನ್ನು ಬೆಳೆಸುವಲ್ಲಿ ವಿಫಲರಾಗಿದ್ದಾರೆ.
ಈ ವರ್ಷದಲ್ಲಿ ಯಾಹೂ ತನ್ನ ಡಿಜಿಟಲ್ ಕಾರ್ಯಗಳನ್ನು 4.8 ಬಿಲಿಯನ್ ಡಾಲರ್ಗೆ ವೆರಿಝೊನ್ ಕಮ್ಯುನಿಕೇಶನ್ ಸಂಸ್ಥೆಗೆ ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡಿತ್ತು, ಆದರೆ ಈಗ ಬಹಿರಂಗವಾಗಿರುವ ಹ್ಯಾಕಿಂಗ್ನಿಂದ ಒಪ್ಪಂದಕ್ಕೆ ಹಾನಿ ಉಂಟಾಗುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.
ಎರಡೂ ಹ್ಯಾಕ್ ಸಂಧರ್ಭಗಳಲ್ಲಿ ಬಳಕೆದಾರರ ಹೆಸರು, ಇ-ಮೇಲ್ ವಿಳಾಸ, ಫೋನ್ ಸಂಖ್ಯೆ, ಜನ್ಮದಿನ ಮತ್ತು ಭದ್ರತಾ ಪ್ರಶ್ನೆ ಹಾಗೂ ಉತ್ತರಗಳನ್ನು ಕದಿಯಲಾಗಿದೆ. ಆದರೆ ಸಂಸ್ಥೆಯ ಪ್ರಕಾರ ಬ್ಯಾಂಕ್ ಖಾತೆಗಳ ವಿವರ ಮತ್ತು ಡೆಬಿಟ್/ಕ್ರೆಡಿಟ್-ಕಾರ್ಡ್ಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ತಿಳಿಸಿದೆ.
ಮೊದಲ ಹ್ಯಾಕ್ ಸುದ್ದಿಗೆ ಪ್ರತಿಕ್ರಿಯೆ ನೀಡಿದ ವೆರಿಝೊನ್, ಯಾಹೂ ಒಪ್ಪಂದದ ಬಗ್ಗೆ ಮರುಪರೀಶಿಲನೆ ಮಾಡಲಾಗುವುದು ಎಂದು ಹೇಳಿದೆ. ಯಾವುದೇ ಅಂತಿಮ ತೀರ್ಮಾನ ತಲುಪುವ ಮೊದಲು ಹೊಸ ಅಭಿವೃದ್ಧಿಯನ್ನು ವಿಮರ್ಶಿಸಲಾಗುವುದು ಎಂದು ವಕ್ತಾರ ಬಾಬ್ ವರೆಟುನಿ ಹೇಳಿದ್ದಾರೆ.
ಖಾತೆಗಳ ಭದ್ರತೆಯಲ್ಲಿ ತಪ್ಪುಗಳು ನಡೆದಿರುವುದರಿಂದ, ’ಖಂಡಿತವಾಗಿಯೂ ನಾವು ವೆರಿಝೊನ್ ಜೊತೆ ಮಾತುಕತೆಯ ನಡೆಸಿ ಬೆಲೆ ಕಡಿಮೆ ಮಾಡಲು ಸಹಕರಿಸುತ್ತೇವೆ’ ಎಂದು ಲಿಟಾನ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.