ಲಖನೌ: ಬಿಹಾರದಲ್ಲಿ ವಿಶ್ವದ ಅತಿ ದೊಡ್ಡ ಹಿಂದೂ ದೇವಾಲಯವು ನಿರ್ಮಾಣವಾಗಲಿದ್ದು, ಇದರ ನಿರ್ಮಾಣ ಕಾರ್ಯವು 2017 ರಲ್ಲಿ ಪ್ರಾರಂಭಗೊಳ್ಳಲಿದೆ.
ವಿಶ್ವದಲ್ಲೇ ಅತಿ ದೊಡ್ಡ ಹಿಂದೂ ದೇವಾಲಯ ‘ವಿರಾಟ್ ರಾಮಾಯಣ ಮಂದಿರ’ದ ನಿರ್ಮಾಣ ಕಾರ್ಯವು 2017 ರ ಹೋಳಿ ಹಬ್ಬದ ನಂತರ ಪ್ರಾರಂಭಗೊಳ್ಳಲಿದೆ.
ಸುಮಾರು 165 ಎಕರೆ ವಿಸ್ತಾರದಲ್ಲಿ 18 ಮಂದಿರಗಳಿರುವ ದೇಗುಲವು ಪಶ್ಚಿಮ ಚಂಪಾರನ್ ಜಿಲ್ಲೆಯ ಕೇಸರಿಯಾದಲ್ಲಿನ ಜಾನಕಿ ನಗರದಲ್ಲಿ ನಿರ್ಮಾಣಗೊಳ್ಳಲಿದೆ. ಇದು ಪಟ್ನಾದಿಂದ 150 ಕಿ.ಮೀ. ದೂರದಲ್ಲಿದೆ. ದೇಗುಲ ನಿರ್ಮಾಣ ವೆಚ್ಚವು ಪ್ರಥಮ ಹಂತದಲ್ಲಿ 200 ಕೋಟಿ ರೂ. ತಗುಲಲಿದೆ ಎಂದು ಅಂದಾಜಿಸಲಾಗಿದೆ.
405 ಅಡಿ ಎತ್ತರ ಗೋಪುರ ನಿರ್ಮಾಣ ಮಾಡಲಾಗುತ್ತಿದ್ದು, ಅಷ್ಟ ದಿಕ್ಕುಗಳ ಆಕಾರವನ್ನು ಹೊಂದಿರಲಿದೆ. ದೇಗುಲದ ಆವರಣದಲ್ಲಿ ಬೃಹತ್ ಶಿವಲಿಂಗವೊಂದನ್ನು ಸ್ಥಾಪಿಸಲಾಗುತ್ತಿದ್ದು, ಇದು 44 ಅಡಿ ಎತ್ತರ ಮತ್ತು 33 ಅಡಿ ಸುತ್ತಳತೆ ಹೊಂದಿದ್ದು, ಈ ಶಿವಲಿಂಗ ಜಗತ್ತಿನಲ್ಲಿಯೇ ಅತಿ ಎತ್ತರದ್ದಾಗಿದ್ದು, ಅಪರೂಪದ್ದಾಗಿರಲಿದೆ.
ಕಾಂಬೋಡಿಯಾದಲ್ಲಿನ ವಿಶ್ವಪ್ರಸಿದ್ಧ ಅಂಗೋರ್ ವಾಟ್ ದೇಗುಲದಂತೆಯೇ ವಿರಾಟ್ ರಾಮಾಯಣ ಮಂದಿರ ಹೋಲುತ್ತಿದ್ದ ಹಿನ್ನಲೆಯಲ್ಲಿ ಕಾಂಬೋಡಿಯಾ ಆಕ್ಷೇಪಣೆ ಮಾಡಿತ್ತು. ಈ ಹಿನ್ನಲೆಯಲ್ಲಿ ಕಳೆದ ವರ್ಷವೇ ಪ್ರಾರಂಭಗೊಳ್ಳಬೇಕಾಗಿದ್ದ ಹಿಂದೂ ದೇವಾಲಯ ಕಾಂಬೋಡಿಯಾದ ಆಕ್ಷೇಪಣೆಯ ಬಳಿಕ ಮೂಲ ನಕ್ಷೆಯಲ್ಲಿ ಕೆಲ ಬದಲಾವಣೆ ಮಾಡಿಕೊಂಡ ಬಳಿಕ ಇದೀಗ 2017 ರಲ್ಲಿ ದೇಗುಲ ನಿರ್ಮಾಣ ಪ್ರಾರಂಭಗೊಳ್ಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.