ನವದೆಹಲಿ: ಕೇಂದ್ರ ಸರ್ಕಾರದ ನೋಟು ನಿಷೇಧದ ನಂತರ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಉತ್ತೇಜಿಸುವ ಸಲುವಾಗಿ, ಇದೀಗ ಸಿಬಿಎಸ್ಇ ಮಂಡಳಿಯು ಮುಂದಿನ ವರ್ಷ ಜನವರಿಯಿಂದ ಶಾಲಾ ಶುಲ್ಕವನ್ನು ಆನ್ಲೈನ್ ಅಥವಾ ನಗದು-ಅಲ್ಲದ(ಕ್ಯಾಶ್ಲೆಸ್) ರೂಪದಲ್ಲಿ ಪಡೆಯಲು ತನ್ನೆಲ್ಲಾ ಅಧಿಕೃತ ಸಂಯೋಜಿತ ಶಾಲೆಗಳಿಗೆ ಹೇಳಿದೆ.
ಈ ಕುರಿತು ಒಂದು ಸುತ್ತೋಲೆಯನ್ನು ಹೊರಡಿಸಲಾಗಿದ್ದು, ಅದರಲ್ಲಿ ‘ಕ್ಯಾಶ್ಲೆಸ್ ವ್ಯವಹಾರವು ತುಂಬ ಪ್ರಯೋಜನಕಾರಿಯಾಗಿದೆ ಮತ್ತು ಸಿಬಿಎಸ್ಸಿ ಮಂಡಳಿಯು ಪರೀಕ್ಷಾ ಶುಲ್ಕ ಸಂಗ್ರಹಕ್ಕೆ, ಸದಸ್ಯತ್ವ ಪಡೆಯಲು ಹಾಗೂ ಇನ್ನೂ ಹಲವು ಚಟುವಟಿಕೆಗಳಿಗೆ ಇ-ಪಾವತಿ ಸೌಲಭ್ಯವನ್ನು ಜಾರಿ ತಂದಿದೆ’ ಎಂದು ಸಿಬಿಎಸ್ಇ ಕಾರ್ಯದರ್ಶಿ ಜೊಸೆಫ್ ಇಮ್ಯಾನುಯೆಲ್ ಹೇಳಿದ್ದಾರೆ.
ಸಿಬಿಎಸ್ಇ ಬೋರ್ಡ್ ಅದರ ಅಂಗ ಶಾಲೆಗಳಿಗೆ ಸಿಬ್ಬಂದಿಯ ಸಂಬಳವನ್ನು ಬ್ಯಾಂಕ್ ಮೂಲಕ ವಿತರಿಸಲು ಸೂಚಿಸಿದೆ. ಶಾಲೆಗಳಲ್ಲಿ ನಗದು ರೂಪದ ವ್ಯವಹಾರವನ್ನು ಕಡಿಮೆ ಮಾಡುವ ದೃಷ್ಟಿಯಿಂದ, ಸಿಬಿಎಸ್ಇಯ ಎಲ್ಲ ಶಾಲೆಗಳು ವಿದ್ಯಾರ್ಥಿಗಳ ಶುಲ್ಕವನ್ನು ಆನ್ಲೈನ್ ಅಥವಾ ಕ್ಯಾಶ್ಲೆಸ್ ಕ್ರಮದಲ್ಲಿ ಸಂಗ್ರಹಿಸಲು ನಿರ್ದೇಶಿದೆ ಎಂದು ಕಾರ್ಯದರ್ಶಿ ಜೊಸೆಫ್ ಹೇಳಿದ್ದಾರೆ.
ಶಾಲೆಗಳು ತಮ್ಮ ವಿವಿಧ ಸೇವೆಗಳಿಗೆ, ಕೆಲಸಗಾರರ ವೇತನ, ಯಾವುದೇ ವಸ್ತುಗಳ ಖರೀದಿ ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧಿಯ ಗುತ್ತಿಗೆ ಹಣವನ್ನು ಕಡ್ಡಾಯವಾಗಿ ಹಾಗೂ ಇತರ ವಾಹಿವಾಟುಗಳನ್ನು ಕ್ಯಾಶ್ಲೆಸ್ ರೂಪದಲ್ಲಿ ಪಾವತಿಸಬೇಕು ಎಂದು ಅವರು ಹೇಳಿದ್ದಾರೆ.
ಕ್ಯಾಶ್ಲೆಸ್ ವ್ಯವಹಾರದ ಬಗ್ಗೆ ಪ್ರಚಾರ ನೀಡಲು ಹಾಗೂ ಜನರಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ, ವಿದ್ಯಾರ್ಥಿಗಳನ್ನು ಪ್ರೇರೇಪಿಸಲು ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಸಿಬಿಎಸ್ಇ ಬೋರ್ಡ್ ನಿರ್ದೇಶಿಸಿದೆ. ವಿದ್ಯಾರ್ಥಿಗಳಿಗೆ ಕ್ಯಾಶ್ಲೆಸ್ ವ್ಯವಹಾರದ ವ್ಯವಸ್ಥೆ ಕುರಿತು ಕಾರ್ಯಾಗಾರ, ಉಪನ್ಯಾಸ, ಇತರ ಚಟುವಟಿಕೆ ನಡೆಸಬೇಕು. ಶಾಲೆಯಲ್ಲಿನ ಹಿರಿಯ ವಿದ್ಯಾರ್ಥಿಗಳ ಸಹಾಯದಿಂದ ಅವರು ವಾಸವಿರುವ ಪ್ರದೇಶಗಳಲ್ಲಿನ ಮನೆಯ ಹರಿಯರಿಗೆ ಕ್ಯಾಶ್ಲೆಸ್ ವ್ಯವಹಾರದ ಬಗ್ಗೆ, ಆನ್ಲೈನ್ ವ್ಯವಹಾರ ಕುರಿತು ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸೂಚಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.