ನವದೆಹಲಿ: ಸೈಬರ್ ವಂಚನೆ ತಡೆಗಟ್ಟಲು ಸ್ಮಾರ್ಟ್ಫೋನಿನಲ್ಲಿ ಬಳಸಲಾಗುವ 4 ಆ್ಯಪ್ಗಳನ್ನು ತೆಗೆದುಹಾಕಲು ಬಳಕೆದಾರರಿಗೆ ಗೃಹ ಸಚಿವಾಲಯ ತಿಳಿಸಿದೆ.
ಪಾಕಿಸ್ಥಾನದ ಕೆಲ ಏಜೆನ್ಸಿಗಳು ಸ್ಮಾರ್ಟ್ಫೋನಿನಲ್ಲಿ ಬಳಸಲಾಗುವ ಕೆಲವೊಂದು ಆ್ಯಪ್ಗಳ ಮೂಲಕ ಮಾಲ್ವೆರ್/ವೈರಸ್ಗಳನ್ನು ಹರಿಬಿಟ್ಟು ಬಳಕೆದಾರರ ಮಾಹಿತಿಯನ್ನು ಕದಿಯಲು ಪ್ರಯತ್ನಿಸುತ್ತಿವೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ಗೃಹ ಸಚಿವಾಲಯವು ಸೈಬರ್ ವಂಚನೆ ತಡೆಗಟ್ಟಲು ಮೊಬೈಲ್ ಬಳಕೆದಾರರಿಗೆ ತಕ್ಷಣವೇ ಈ ನಾಲ್ಕು ಆ್ಯಪ್ಗಳನ್ನು ಅಳಿಸಿಹಾಕಲು ಕೇಳಿಕೊಂಡಿದೆ. ಆ ನಾಲ್ಕು ಆ್ಯಪ್ಗಳು Top Gun (Game App), Mpjunkie (Music App), Bdjunkie (video App) ಮತ್ತು Talking Frog (Entertainment App)
ಪಾಕಿಸ್ಥಾನಿ ಏಜೆನ್ಸಿಗಳು ಭಾರತದಲ್ಲಿರುವ ಮೊಬೈಲ್ಫೋನ್ಗಳಿಗೆ ಮಾಲ್ವೆರ್/ವೈರಸ್ಗಳನ್ನು ಹರಿಬಿಟ್ಟು ಬಳಕೆದಾರರ ಸೂಕ್ಷ್ಮ ಮಾಹಿತಿ ಹಾಗೂ ಬೇಹುಕಾರಿಕೆ ಉದ್ದೇಶಕ್ಕಾಗಿ ಕದಿಯುತ್ತಿವೆ ಎಂದು ಗೃಹ ಸಚಿವಾಲಯ ಮೂಲಗಳು ತಿಳಿಸಿದೆ.
ಇಂತಹ ಆ್ಯಪ್ಗಳಿರುವ ಸ್ಮಾಟ್ಫೋನ್ಗಳಿಂದ ಮೊಬೈಲ್ ಬ್ಯಾಂಕಿಂಗ್ ಬಳಸುವುದರಿಂದ ಸೈಬರ್ ವಂಚನೆಗಳು ಹೆಚ್ಚಾಗುವ ಸಾಧ್ಯತೆಗಳಿರುತ್ತವೆ.
ಮಾಲ್ವೆರ್(ದೋಷಯುಕ್ತ ತಂತ್ರಾಂಶ) ತಂತ್ರಾಂಶವನ್ನು ಯಾವುದೇ ಕಂಪ್ಯೂಟರ್ ಅಥವಾ ಮೊಬೈಲ್ನಲ್ಲಿರುವ ಸೂಕ್ಷ್ಮ ಮಾಹಿತಿಯನ್ನು ಮತ್ತು ಡೇಟಾವನ್ನು ಸಂಗ್ರಹಿಸಲು ಬಳಸಲಾಗುತ್ತದೆ. ಇದು ಒಂದು ಬಗೆಯ ವೈರಸ್ ಆಗಿದ್ದು ಬಳಕೆದಾರರಿಗೆ ಗೊತ್ತಾಗದಂತೆ ಸಾಧನಗಳಲ್ಲಿ ಸೇರಿಕೊಳ್ಳುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.