ಪೋರ್ಟ್ ಬ್ಲೇರ್: ಕೇಂದ್ರಾಡಳಿತ ಪ್ರದೇಶದ ಆಡಳಿತ ಮಂಡಳಿ ಹಾಗೂ ಭದ್ರತಾ ಪಡೆ ಸಿಬ್ಬಂದಿಗಳು ಅಂಡಮಾನ್ ಮತ್ತು ನಿಕೋಬಾರ್ನ ನೀಲ್ ಮತ್ತು ಹ್ಯಾವ್ಲಾಕ್ ದ್ವೀಪಗಳಲ್ಲಿ ಸಿಲುಕಿದ್ದ ವಿದೇಶಿ ಪ್ರವಾಸಿಗರು ಸೇರಿದಂತೆ ೨,೩೭೬ಕ್ಕೂ ಅಧಿಕ ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ.
ನೀಲ್ ಮತ್ತು ಹ್ಯಾವ್ಲಾಕ್ ದ್ವೀಪಗಳಲ್ಲಿ ‘ವರ್ದಾ’ ಚಂಡಮಾರುತ ಮತ್ತು ಪ್ರತಿಕೂಲ ವಾತಾವರಣದ ಕಾರಣ ಅಲ್ಲಿ ಸಿಲುಕಿದ್ದ 2,376 ಪ್ರವಾಸಿಗರನ್ನು ಕಾರ್ಯಾಚರಣೆಯಲ್ಲಿ ರಕ್ಷಿಸಿ ಪೋರ್ಟ್ ಬ್ಲೇರ್ಗೆ ಸ್ಥಳಾಂತರಿಸಲಾಗಿದೆ. ಇವರಲ್ಲಿಸ್ಪೇನ್, ಜರ್ಮನಿ, ಇಸ್ರೇಲ್, ಐಲ್ಯಾಂಡ್, ಇಟಲಿ ಮತ್ತಿರ ರಾಷ್ಟ್ರಗಳ 15 ಮಂದಿ ವಿದೇಶಿಗರು ಸೇರಿದ್ದಾರೆ ಎಂದು ವಿಪತ್ತು ನಿರ್ವಹಣಾ ನಿರ್ದೇಶನಾಲಯ ತಿಳಿಸಿದೆ.
ಭಾರತೀಯ ನೌಕಾಪಡೆಯ 6 ನೌಕೆಗಳಾದ ಕಾರ್ಮುಖ. ಕುಂಭೀರ್, ಬಿಟ್ರಾ., ಬರತಾಂಗ್, ಎಲ್ಸಿಯು ೨೭ ಹಾಗೂ ೩೮, ಕರಾವಳಿ ರಕ್ಷಣಾ ಪಡೆಗಳ 3 ಹಡಗುಗಳು, ಭಾರತೀಯ ವಾಯು ಸೇನೆಯ 3 ಎಂಐ-17 ಚಾಪರ್ಗಳ ಸಹಾಯದಿಂದ ಬಂಗಾಲ ಕೊಲ್ಲಿಯ ದ್ವೀಪಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.