ನವದೆಹಲಿ: ಒಂದು ಗಮಾನಾರ್ಹ ಅಭಿವೃದ್ಧಿಯಂತೆ ಭಾರತವನ್ನು ತನ್ನ ‘ಪ್ರಮುಖ ರಕ್ಷಣಾ ಪಾಲುದಾರ’ ಎಂದು ಅಮೇರಿಕಾ ಹೆಸರಿಸಿದೆ.
ಭಾರತದ ರಕ್ಷಣಾ ಸಚಿವ ಮನೋಕರ್ ಪರಿಕ್ಕರ್ ಮತ್ತು ಯುಎಸ್ ರಕ್ಷಣಾ ಕಾರ್ಯರ್ದರ್ಶಿ ಆಷ್ಟನ್ ಕಾರ್ಟರ್ ನಡುವಿನ ಭೇಟಿಯ ಸಂದರ್ಭ ನಡೆದ ಸಭೆಯಲ್ಲಿ ಭಾರತ ಪ್ರಮುಖ ರಕ್ಷಣಾ ಪಾಲುದಾರ ಎಂದು ಹೆಸರಿಸಿರುವುದಾಗಿ ವರದಿಯಾಗಿದೆ.
ಇದೇ ವೇಳೆ ಎರಡೂ ದೇಶಗಳು ಭಯೋತ್ಪಾದನೆಯ ಕುರಿತಾಗಿ ಚರ್ಚೆ ನಡೆಸಿದ್ದು, ಭಯೋತ್ಪಾದನೆ ನಿಗ್ರಹ ಸಹಕಾರ ಬಲಪಡಿಸುವಂತೆ ಒಪ್ಪಿಗೆ ಸೂಚಿಸಿವೆ.
ಪ್ರಮುಖ ರಕ್ಷಣಾ ಪಾಲುದಾರ ಎನ್ನುವುದು ಭಾರತಕ್ಕೆ ಒಂದು ವಿಶೇಷ ಸ್ಥಾನವಾಗಿದೆ. ಅಮೇರಿಕಾವು ಭಾರತ ಮತ್ತು ಇತರ ಮಿತ್ರ ರಾಷ್ಟ್ರಗಳ ಸಹಭಾಗಿತ್ವದಲ್ಲಿ ರಕ್ಷಣಾ ಸಾಮಗ್ರಿಗಳ ವ್ಯಾಪಾರ ಮತ್ತು ತಂತ್ರಜ್ಞಾನ ಹಂಚಿಕೆಯಲ್ಲಿ ಪ್ರಗತಿಗೆ ಇದು ಸಹಕಾರಿಯಾಗಿದೆ.
ಪರಿಕ್ಕರ್ ಮತ್ತು ಕಾರ್ಟರ್ ಅವರ ಸಭೆಯಲ್ಲಿ ದ್ವೀಪಕ್ಷಿಯ ರಕ್ಷಣಾ ಸಂಬಂಧಗಳ ಪ್ರಗತಿಯ ಬಗ್ಗೆ ವಿಮರ್ಶೆ ನಡೆಸಿ ಭವಿಷ್ಯದಲ್ಲಿ ಭಾರತ-ಯುಎಸ್ ಭದ್ರತಾ ಸಹಕಾರದ ಬಗ್ಗೆ ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.