ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಇದ್ದು, ಗೃಹ, ವಾಹನ ಮತ್ತು ಕಾರ್ಪೋರೇಟ್ ಸಾಲಗಾರರಿಗೆ ತಾತ್ಕಾಲಿಕ ಸಮಾಧಾನ ನೀಡಲಿದೆ.
ಆರ್ಬಿಐ ಗವರ್ನರ್ ಊರ್ಜಿತ್ ಪಟೇಲ್ ನೇತೃತ್ವದ 6 ಸದಸ್ಯರ ಹಣಕಾಸು ನೀತಿ ಸಮಿತಿ, ಕೇಂದ್ರ ಬ್ಯಾಂಕ್ ಇತರ ಬ್ಯಾಂಕ್ಗಳಿಗೆ ನೀಡುವ ಸಾಲದ ಮೇಲಿನ ರೆಪೋ ದರ ಶೇ. 6.25ಅಥವಾ ಅಲ್ಪಾವಧಿ ದರವನ್ನು ಉಳಿಸಿಕೊಂಡಿದೆ. ಜೊತೆಗೆ ಶೇ. 5.75 ವ್ಯತಿರಿಕ್ತ ದರದಲ್ಲಿ (ರಿವರ್ಸ್ ರೆಪೋ ದರ) ಯಾವುದೇ ಬದಲಾವಣೆ ಮಾಡಿಲ್ಲ.
ಇದು ಕೇಂದ್ರ ಸರ್ಕಾರದ ರೂ.500 ಮತ್ತು ರೂ. 1000 ನೋಟುಗಳ ಅನಾಣ್ಯೀಕರಣದ ನಂತರ ಆರ್ಬಿಐಯ ಮೊದಲ ವಿತ್ತೀಯ ನೀತಿ ಪರಿಶೀಲನೆಯಾಗಿದೆ.
ಕೇಂದ್ರ ಬ್ಯಾಂಕ್ ಪ್ರಸಕ್ತ ಹಣಕಾಸು ವರ್ಷ 2016-17ರ ಬೆಳವಣಿಗೆ ಮುನ್ಸೂಚನೆ ದರ (ಜಿಡಿಪಿ)ವನ್ನು ಶೇ.7.6ರಿಂದ 7.1ಕ್ಕೆ ಇಳಿಸಿದೆ.
ಮರುಖರೀದಿ ದರವು ಆರ್ಬಿಐ ಇತರ ವಾಣಿಜ್ಯ ಬ್ಯಾಂಕ್ಗಳಿಗೆ ನೀಡುವ ಸಾಲದ ಬಡ್ಡಿದರವಾಗಿದ್ದು, ವಾಣಿಜ್ಯ ಬ್ಯಾಂಕ್ ವ್ಯಕ್ತಿಗಳಿಗೆ, ಕಂಪೆನಿಗಳಿಗೆ ನೀಡುವ ಗೃಹ ಸಾಲ, ವಾಹನ ಮತ್ತು ಶೈಕ್ಷಣಿಕ ಸಾಲವಾಗಿದೆ.
2016-17ರ ಜಿವಿಎ ದರವನ್ನು 7.6ರಿಂದ 7.1ಕ್ಕೆ ಪರಿಷ್ಕರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.