ನವದೆಹಲಿ: ದೇಶದಾದ್ಯಂತ ಡಿಜಿಟಲ್ ವ್ಯವಹಾರ ಉತ್ತೇಜಿಸುವ ಸಲುವಾಗಿ ಮುಂದಿನ ನಾಲ್ಕು ತಿಂಗಳುಗಳಲ್ಲಿ ಬ್ಯಾಂಕ್ಗಳು 10 ಲಕ್ಷ ಹೆಚ್ಚುವರಿ ಪಾಯಿಂಟ್ ಆಫ್ ಸೇಲ್ (ಪಿಒಎಸ್) ಟರ್ಮಿನಲ್ಗಳನ್ನು ಅನುಸ್ಥಾಪಿಸುವಂತೆ ಕೇಂದ್ರ ಸರ್ಕಾರ ಕೇಳಿಕೊಂಡಿದೆ.
ಈ ನಿಟ್ಟಿನಲ್ಲಿ ಬ್ಯಾಂಕ್ಗಳು ಈಗಾಗಲೇ 6 ಲಕ್ಷ ಪಾಯಿಂಟ್ ಆಫ್ ಸೇಲ್ ಯಂತ್ರಗಳನ್ನು ಇರಿಸಿದ್ದು, 4 ಲಕ್ಷ ಹೆಚ್ಚುವರಿ ಯಂತ್ರಗಳನ್ನು ಆರ್ಡರ್ ಮಾಡುವ ಸಾಧ್ಯತೆ ಇದೆ. ಪ್ರಸ್ತುತ ದೇಶದಾದ್ಯಂತ ವ್ಯಾಪಾರಸ್ಥರಲ್ಲಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಪಾವತಿಗಳಿಗೆ ಸುಲಭವಾಗುವಂತೆ 15 ಲಕ್ಷ ಟರ್ಮಿನಲ್ಗಳಿವೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಡಿಜಿಟಲ್ ಪಾವತಿ ವಿಸ್ತರಿಸುವ ಮತ್ತು ನಗದು ರಹಿತ ವ್ಯವಹಾರ ಅನುಕೂಲಗೊಳಿಸುವ ಭಾಗವಾಗಿ ಮಾರ್ಚ್ 31ರ ಒಳಗಾಗಿ ಹೆಚ್ಚುವರಿ 1 ಮಿಲಿಯನ್ ಪಿಎಸ್ಒಗಳನ್ನು ಸ್ಥಾಪಿಸಲು ಕೇಂದ್ರ ನಿರ್ಧರಿಸಿದೆ ಎಂದು ಸಚಿವಾಲಯ ತಿಳಿಸಿದೆ.
ಪಿಒಎಸ್ ಯಂತ್ರಗಳ ಖರೀದಿಯನ್ನು ಉತ್ತೇಜಿಸಲು ಅದರ ಸ್ವಾಧೀನದ ಸಂದರ್ಭ ಪಾವತಿಸಬೇಕಾದ ಶೇ.16.5ರಷ್ಟು ತೆರಿಗೆ ಶುಲ್ಕವನ್ನು ಮಾರ್ಚ್ 31ರ ವರೆಗೆ ಕಡಿತಗೊಳಿಸಲಾಗಿದೆ.
ಅಸಂಘಟಿತ ಕಾರ್ಮಿಕರು ಬ್ಯಾಂಕ್ ಖಾತೆ ತೆರೆಯುವಂತೆ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಹಾಗೂ ರಾಜ್ಯ ಆಡಳಿತ ಮಂಡಳಿ ಜಂಟಿಯಾಗಿ ಅಭಿಯಾನ ಆರಂಭಿಸಿದೆ. ಒಟ್ಟು 2,73,919 ಶಿಬಿರಗಳನ್ನು ಆಯೋಜಿಸಲಾಗಿದ್ದು, 24.54 ಲಕ್ಷ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.