ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ 2005ರ ಮಹಾತ್ಮಾ ಗಾಂಧಿ ಸರಣಿಯ ಹೊಸ 100 ರೂ. ನೋಟುಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಇದು ರಿಸರ್ವ್ ಬ್ಯಾಂಕ್ನ ಗವರ್ನರ್ ಡಾ. ಊರ್ಜಿತ್ ಪಟೇಲ್ರ ಸಹಿ ಹೊಂದಿರಲಿದೆ.
ಈ ಮಧ್ಯೆ ಹಳೆಯ ರೂ.100 ಮುಖಬೆಲೆಯ ನೋಟುಗಳು ಕಾನೂನಾತ್ಮಕಾಗಿ ಮುಂದುವರೆಯಲಿವೆ ಎಂದು ಆರ್ಬಿಐ ತಿಳಿಸಿದೆ.
ಮಹಾತ್ಮಾ ಗಾಂಧಿ 2005 ಸರಣಿಯ ಹೊಸ 100 ರೂ. ನೋಟುಗಳು ರಿಸರ್ವ್ ಬ್ಯಾಂಕ್ನ ಗವರ್ನರ್ ಡಾ. ಊರ್ಜಿತ್ ಪಟೇಲ್ರ ಸಹಿ ಹೊಂದಿರಲಿದೆ. ಇದು ಯಾವುದೇ ಹೆಚ್ಚುವರಿ ಅಕ್ಷರಗಳನ್ನು ಹೊಂದಿರುವುದಿಲ್ಲ. ಇದು ಹಳೆ ರೂ.100 ನೋಟುಗಳಂತೆ ಇರಲಿದ್ದು, ಇದರ ಮುದ್ರಣ ವರ್ಷ 2016 ಇರಲಿದೆ. ಇದರ ಸಂಖ್ಯೆಗಳ ಅಂಕಿಗಳು ಆರೋಹಣ ಗಾತ್ರಗಳಲ್ಲಿ ಇರಲಿದೆ ಎಂದು ಆರ್ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಕೇಂದ್ರ ಸರ್ಕಾರದ ಅನಾಣ್ಯೀಕರಣದ ಕಾರಣ 500 ಮತ್ತು 2000 ರೂ. ನೋಟುಗಳ ಕೊರತೆಯಿಂದ ನಗದು ಹಣದ ಅಭಾವ ಉಂಟಾಗಿದ್ದು, 100 ರೂ. ನೋಟುಗಳನ್ನು ಮುದ್ರಿಸಲು ಆರ್ಬಿಐ ಮುಂದಾಗಿದೆ.
೧೦೦ ರೂ. ನೋಟುಗಳನ್ನು ಎಟಿಎಂಗಳಲ್ಲಿ ಬಳಸಲಾಗುತ್ತಿದ್ದು, ಬೇಗನೇ ಖಾಲಿಯಾಗುತ್ತಿವೆ. ಇದರ ಚಲಾವಣೆ ಕೂಡ ಸದ್ಯ ಶೇ.16ರಷ್ಟೇ ಇದ್ದು, 100 ರೂ. ನೋಟುಗಳನ್ನು ಮುದ್ರಿಸಲಾಗುವುದು ಎಂದು ಅದು ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.