ನವದೆಹಲಿ: ಮುಖೇಶ್ ಅಂಬಾನಿ ಅವರ ರಿಲಯನ್ಸ್ ಜಿಯೋ ಆಫರ್ನ ವಿಸ್ತರಣೆಯಿಂದ ಈಗಾಗಲೇ ಭಾರತದ ಟೆಲಿಕಾಂ ಕಂಪೆನಿಗಳನ್ನು ಬೆಚ್ಚಿಬೀಳಿಸಿವೆ.
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸೆನ್ಎಲ್) ತನ್ನ ಬಳಕೆದಾರಿಗೆ 149 ರೂ. ಅನಿಯಮಿತ ಕರೆಗಳ ಯೋಜನೆ ಬಿಡುಗಡೆ ಮಾಡುವ ಯೋಜನೆ ಹೊಂದಿದೆ ಎಂದು ವರದಿ ತಿಳಿಸಿದೆ.
ಈ ಯೋಜನೆ ಜಾರಿಗೆ ಬಂದಲ್ಲಿ ಬಿಎಸ್ಎನ್ಎಲ್ ಬಳಕೆದಾರರು ಶೀಘ್ರದಲ್ಲೇ ಅನಿಯಮಿತ ಸ್ಥಳೀಯ ಮತ್ತು ರಾಷ್ಟ್ರೀಯ ಕರೆಗಳನ್ನು ಮಾಡಬಹುದು. ಈ ಮೊಬೈಲ್ ಟ್ಯಾರಿಫ್ 300 MB ಡಾಟಾ ಪ್ಲಾನ್ನ್ನು ಕೂಡ ಒಳಗೊಂಡಿದೆ. ಈ ಯೋಜನೆ ಬಗ್ಗೆ ಬಿಎಸ್ಎನ್ಎಲ್ ಜನವರಿ 1, 2017ರಂದು ಘೋಷಿಸುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
ಮುಖೇಶ್ ಅಂಬಾನಿ ಅವರು ರಿಲಯನ್ಸ್ ಜಿಯೋ ವೆಲ್ಕಮ್ ಆಫರ್ನ್ನು ಸೆಪ್ಟೆಂಬರ್ 4ರಂದು ಬಿಡುಗಡೆ ಮಾಡಿದ್ದು, ಇದನ್ನು ಜಿಯೋ ಹ್ಯಾಪಿ ನ್ಯೂ ಇಯರ್ ಆಫರ್ನೊಂದಿಗೆ ಡಿ.31ರಿಂದ ಮಾರ್ಚ್ 31ಕ್ಕೆ ವಿಸ್ತರಿಸಿದ್ದಾರೆ. ಇದರ ಫೇರ್ ಯೂಸೇಜ್ ಪಾಲಿಸಿ (ಎಫ್ಯುಪಿ) ಗ್ರಾಹಕರಿಗೆ ಉಚಿತ ವಾಯ್ಸ್ ಮತ್ತು ವೀಡಿಯೋ ಕರೆಗಳ ಜೊತೆಗೆ ಪ್ರತಿ ದಿನ 1 GB ಡಾಟಾ ನೀಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.