ಅಯೋಧ್ಯಾ: ಅಯೋಧ್ಯೆಯ ಬಾಬ್ರಿ ಮಸೀದಿ ಧ್ವಂಸ ನಡೆದು 24 ವರ್ಷಗಳಾಗಿದ್ದು, ಡಿ.6ರಂದು ಅವಳಿ ನಗರಗಳಾದ ಅಯೋಧ್ಯಾ ಮತ್ತು ಫೈಸಾಬಾದ್ಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ಅಯೋಧ್ಯೆಯಲ್ಲಿ 10 ಅರೆಸೇನಾ ತುಕಡಿಗಳನ್ನು ನಿಯೋಜಿಸಲಾಗಿದ್ದು, ಫೈಸಾಬಾದ್ ಜಿಲ್ಲಾಧಿಕಾರಿ ವಿವೇಕ್ ಕುಮಾರ್ ಹಾಗೂ ಹಿರಿಯ ಪೊಲೀಸ್ ಎಸ್ಪಿ ಅನಂತ್ ದೇವ್ ಅವರದು ಜಂಟಿಯಾಗಿ ಭದ್ರತಾ ವ್ಯವಸ್ಥೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ರದೌಲಿ ಮತ್ತು ಭಾದರ್ಸಾ ನಗರಗಳಲಲೂ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ.
ಅಯೋಧ್ಯಾ ಮತ್ತು ಫೈಸಾಬಾದ್ನ ಎಲ್ಲ ದೇವಾಲಯಗಳಿಗೆ ಆಗಮಿಸುವ ಭಕ್ತರು, ದರ್ಶಕರು, ಪ್ರವಾಸಿಗರ ಹೆಸರು, ವಿಳಾಸಗಳನ್ನು ದಾಖಲಿಸುವಂತೆ ಕೋರಲಾಗಿದೆ.
ಇದೇ ವೇಳೆ ರಾಷ್ಟ್ರ ಬಾಬ್ರಿ ಮಸೀದಿ ಧ್ವಂಸದ 24 ವರ್ಷವನ್ನು ಗಮನಿಸುತ್ತಿದ್ದು, ಬಾಬ್ರಿ ಮಸೀದಿ ಧ್ವಂಸವನ್ನು ವಿರೋಧಿಸುತ್ತಿರುವ ಮತ್ತು ರಾಮ ಮಂದಿರ ನಿರ್ಮಾಣಕ್ಕೆ ಒತ್ತಾಯಿಸುತ್ತಿರುವ ಗುಂಪುಗಳು ಸುಪ್ರೀಂ ಕೋರ್ಟ್ನ ಸೌಹಾರ್ದತೀರ್ಪಿಗೆ ಕಾದು ಕುಳಿತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.