ಲಂಡನ್: ಯುನೈಟೆಡ್ ಕಿಂಗ್ಡಮ್ನ ಹಿಂದೂಗಳ ಒಂದು ಗುಂಪು ಹಾಗೂ ಬ್ರಿಟಿಷ್ ಸಸ್ಯಾಹಾರಿಗಳು ಗೋಮಾಂಸದ ಕೊಬ್ಬು ರೂಪದ ಪ್ರಾಣಿಗಳ ಕೊಬ್ಬುಗಳನ್ನು ಬಳಸಿ ಮುದ್ರಿಸಲಾದ ಹೊಸ 5 ಪೌಂಡ್ ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡುವಂತೆ ಪ್ರತಿಭಟಿಸಲು ಮುಂದಾಗಿದ್ದಾರೆ.
ಟ್ಯಾಲೋ ಅಥವಾ ಪ್ರಾಣಿಗಳ ಕೊಬ್ಬಿನಿಂದ ತಯಾರಿಸಿದ ಉತ್ಪನ್ನ (ಈ ಸಂದರ್ಭದಲ್ಲಿ ಗೋಮಾಂಸ)ವನ್ನು ಸೋಪ್, ಮೇಣದ ಬತ್ತಿ ಮತ್ತಿತರ ಉತ್ಪನ್ನಗಳನ್ನು ತಯಾರಿಸಲು ಬಳಸಲಾಗುತ್ತದೆ.
ದಕ್ಷಿಣ ಇಂಗ್ಲೆಂಡ್ನ ಹರ್ಟ್ಫೋರ್ಡ್ಶೈರ್ನಲ್ಲಿರುವ ಭತಿವೇದಾಂತ ಮನೋರ್ ದೇವಾಲಯ ಪ್ರತಿಭಟನೆಯ ಮುಂಚೂಣಿಯಲ್ಲಿದ್ದು, ಮ್ಯಾನೋರ್ ಯುಕೆಯ ಅತೀ ದೊಡ್ಡ ಹರೇ ಕೃಷ್ಣ ದೇವಾಲಯಗಳಲ್ಲಿ ಒಂದಾಗಿದೆ.
ದೇವಾಲಯದ ಆಡಳಿತ ಮಂಡಳಿ ಫೇಸ್ಬುಕ್ ಸೈನ್ ಇನ್ ಪೋಸ್ಟ್ನಲ್ಲಿ ‘ಪ್ರಾಣಿಗಳ ಕೊಬ್ಬು ಹೊಂದಿದ ಹೊಸ 5 ಪೌಂಡ್ನ ನೋಟುಗಳನ್ನು ಸ್ವೀಕರಿಸಲಾಗುವುದುದಿಲ್ಲ. ಅನಾನುಕೂಲತೆಗೆ ಕ್ಷಮೆ ಕೋರುಯತ್ತೇವೆ ಎಂದು ತಿಳಿಸಿದ್ದಾರೆ.
ಹಿಂದೂ ದೇವಾಲಯಗಳ ರಾಷ್ಟ್ರೀಯ ಮಂಡಳಿ ಹೊಸ ನೋಟುಗಳು ಸರಳ ವಿನಿಮಯದ ಮಾಧ್ಯಮವಲ್ಲ. ಆದರೆ ಇದು ನೋವು ಮತ್ತು ವೇದನೆಯ ಸಂವಹನಕ್ಕೆ ಒಂದು ಮಾಧ್ಯಮವಾಗಿದೆ. ನಾವು ಇದರ ಸಂಪರ್ಕಕ್ಕೆ ಬರಲು ಬಯಸುವುದಿಲ್ಲ ಎಂದು ತನ್ನ ಪ್ರಕಟಣೆಯಲ್ಲಿ ಹೇಳಿದೆ.
ಆದರೆ ಈವರೆಗೆ ಎಷ್ಟು ದೇವಾಲಯಗಳು 5 ಪೌಂಡ್ ನೋಟ್ಗಳನ್ನು ರದ್ದುಗೊಳಿಸಿವೆ ಎಂದು ಅಧಿಕೃತವಾಗಿ ತಿಳಿದು ಬಂದಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.