ನವದೆಹಲಿ: ಭಾರತದ ಆರ್ಥಿಕತೆ 2040ರ ವೇಳೆಗೆ 5 ಪಟ್ಟು ಹೆಚ್ಚುವ ನಿರೀಕ್ಷೆ ಇದ್ದು, ವಿಶ್ವದಲ್ಲೇ ಯಾವುದೇ ರಾಷ್ಟ್ರದ ಆರ್ಥಿಕತೆಗಿಂತ ಹೆಚ್ಚಿನ ಸ್ಥಿರತೆ ಮತ್ತು ಚೇತರಿಕೆಯನ್ನು ಕಂಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
12 ನೇ ಅಂತಾರಾಷ್ಟೀಯ ತೈಲ ಮತ್ತು ಅನಿಲ ಸಮ್ಮೇಳನ ಪೆಟ್ರೋಟೆಕ್-2016 ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು ಉತ್ಪಾದನೆ, ಸಾರಿಗೆ, ನಾಗರಿಕ ವಿಮಾನಯಾನ ಮತ್ತಿತರ ಕ್ಷೇತ್ರಗಳಲ್ಲಿ ಬೆಳವಣಿಗೆಯ ಆಗುವ ನಿರೀಕ್ಷೆ ಇದೆ. ಜಾಗತಿಕ ಆರ್ಥಿಕತೆ ಅಸ್ಥಿರತೆ ಹೊಂದಿದ ಹೊರತಾಗಿಯೂ ಭಾರತದ ಆರ್ಥಿಕತೆ ಚೇತರಿಕೆ ಕಂಡಿದೆ ಎಂದು ಹೇಳಿದ್ದಾರೆ.
ವಿದೇಶಿ ನೇರ ಹೂಡಿಕೆ (ಎಫ್ಡಿಐ) ಉನ್ನತ ಮಟ್ಟದಲ್ಲಿ ಸಾಗುತ್ತಿದ್ದು, ಚಾಲ್ತಿ ಖಾತೆ ನಷ್ಟವು ಸ್ಥಿರವಾಗಿ ಸುಧಾರಿಸುತ್ತಿದೆ ಎಂದು ಹೇಳಿದ್ದಾರೆ.
ಮಾರ್ಚ್ 2018ರ ಒಳಗಾಗಿ ಪ್ರತಿಯೊಬ್ಬರಿಗೂ ವಿದ್ಯುತ್ ಒದಗಿಸುವುದಾಗಿ ಹೇಳಿದ ಅವರು, ಸಮರ್ಥ, ಸಮಂಜಸ ಬೆಲೆಯ ಇಂಧನ ಪೂರೈಕೆ ಭಾರತದ ಅಭಿವೃದ್ಧಿಗೆ ನಿರ್ಣಾಯಕವಾಗಲಿದೆ ಎಂದು ಹೇಳಿದ್ದಾರೆ.
ನಾವು ದೇಶೀಯ ತೈಲ ಮತ್ತು ಅನಿಲ ಉತ್ಪಾದನೆ ಹೆಚ್ಚಿಸಬೇಕು ಮತ್ತು ಆಮದು ಅವಲಂಬನೆಯನ್ನು ಕಡಿಮೆ ಮಾಡಬೇಕು. ಅನಿಲ ಆಧಾರಿತ ಆರ್ಥಿಕತೆ ಕಡೆಗೆ ನಾವು ಗಮನ ಹರಿಸಬೇಕು. ಮುಂದಿನ 5 ವರ್ಷಗಳಲ್ಲಿ 10 ಮಿಲಿನ್ ನೈಸರ್ಗಿಕ ಅನಿಲ ಸಂಪರ್ಕ ಹಾಗೂ 30,000 ಕಿ.ಮೀ. ದಿಪ್ಪಟ್ಟು ಅನಿಲ ಪೈಪ್ಲೈನ್ ಸಂಪರ್ಕ ನೀಡುವ ಗುರಿ ಇದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.