ನವದೆಹಲಿ: ದೇಶದ ವಿವಿಧ ಭಾಗಗಳಲ್ಲಿ ಭಾರತದ ನೌಕಾಪಡೆಗಳು ವಾದ್ಯಗಳನ್ನು ನುಡಿಸುವುದರ (ರೀಟ್ರೀಟ್) ಮುಲಕ ‘ನೌಕಾ ದಿನ’ವನ್ನು ಆಚರಣೆಯ ಸಮಾರಂಭ ಭಾನುವಾರ ಮುಕ್ತಾಯಗೊಂಡಿದೆ.
ನೌಕಾಪಡೆ ಸಿಬ್ಬಂದಿಗಳು ಹಲವು ಪ್ರದರ್ಶನಗಳು, ಡಿಸ್ಪ್ಲೇಗಳನ್ನು ಪ್ರದರ್ಶನಗಳೊಂದಿಗೆ ನೌಕಾ ದಿನ ಆಚರಿಸಿದ್ದು, ಸಾವಿರಾರು ಮಂದಿ ಸಮಾರಂಭದಲ್ಲಿ ಭಾಗವಹಿಸಿದ್ದಾರೆ.
1971ರ ಭಾರತ-ಪಾಕಿಸ್ಥಾನ ಯುದ್ಧದ ಸಂದರ್ಭ ಭಾರತೀಯ ನೌಕಾಪಡೆ ನಡೆಸಿದ ಟ್ರಿಡೆಂಟ್ ಕಾರ್ಯಾಚರಣೆಯ ಸ್ಮರಣಾರ್ಥವಾಗಿ ‘ನೌಕಾ ದಿನ’ವನ್ನು ಆಚರಿಸಲಾಗುತ್ತಿದೆ. ಈ ಯುದ್ಧದ ಸಂದರ್ಭ ಭಾರತೀಯ ನೌಕಾಪಡೆಗಳು ಮೊದಲ ಬಾರಿ ಹಡಗು ನಿಗ್ರಹ ಕ್ಷಿಪಣಿಗಳನ್ನು ಬಳಸಿ ಪಾಕ್ನ ಮೂರು ಯುದ್ಧ ಹಡಗುಗಳನ್ನು ಕರಾಚಿಯ ಸಮುದ್ರಗಳಲ್ಲಿ ಹೊಡೆದುರುಸಿತ್ತು.
ಮುಂಬಯಿಯ ಗೇಟ್ವೇ ಆಫ್ ಇಂಡಿಯಾದಲ್ಲಿ ಭಾರತೀಯ ನೌಕಾಪಡೆ ಸಿಬ್ಬಂದಿಗಳು ವಿವಿಧ ನೌಕಾ ಪ್ರಯೋಗಗಳನ್ನು ಪ್ರದರ್ಶಿಸಿದರು. ವೇಗದ ದಾಳಿ ನಡೆಸುವ ಹಡಗುಗಳ ವಿವಿಧ ಪ್ರಕಾರಗಳನ್ನೂ ಪ್ರದರ್ಶಿಸಲಾಯಿತು.
ವಿಶಾಖಪಟ್ಟಣದಲ್ಲೂ ಇದೇ ರೀತಿಯ ಪ್ರದರ್ಶನ ನಡೆಸಲಾಗಿದ್ದು, 24 ನೌಕಾ ಹಡಗುಗಳು, 17 ನೌಕಾ ವಿಮಾನಗಳ ಪ್ರದರ್ಶನ ನಡೆಸಿದರು.
ನೌಕಾಪಡೆ ಸಿಬ್ಬಂದಿಗಳ ಮುಖ್ಯಸ್ಥ ಸುನಿಲ್ ಲಾಂಬಾ ಅವರ ದೆಹಲಿಯ ನಿವಾಸದಲ್ಲಿ ಆಯೋಜಿಸಲಾಗಿದ್ದ ‘ಆಟ್ ಹೋಮ್’ ಕಾರ್ಯಕ್ರಮದಲ್ಲಿ ಭಾನುವಾರ ಪ್ರಧಾನಿ ಮೋದಿ ಅವರು ಪಾಲ್ಗೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.