ನವದೆಹಲಿ : ಶೀಘ್ರದಲ್ಲೇ ರೂ. 20 ಮತ್ತು ರೂ. 50 ಮುಖಬೆಲೆಯ ನೋಟುಗಳು ಮುದ್ರಣಗೊಳ್ಳಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.
ರೂ. 500 ಮತ್ತು 1000 ಮುಖಬೆಲೆಯ ನೋಟುಗಳ ನಿಷೇಧದ ಬಳಿಕ ಉಂಟಾಗಿರುವ ಹಣದ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಶೀಘ್ರದಲ್ಲಿ ರೂ. 20 ಮತ್ತು 50 ಮುಖಬೆಲೆಯ ಹೊಸ ನೋಟುಗಳನ್ನು ಮುದ್ರಿಸಲಿದೆ.
Issue of ₹ 20 banknotes with the inset letter ‘L’, with numerals in ascending size in number panels and without…https://t.co/EeFGlK1Q2w
— ReserveBankOfIndia (@RBI) December 4, 2016
Issuance of ₹ 50 banknotes without inset letter, with numerals in ascending size in number panels, and without…https://t.co/DaFWRuCEGA
— ReserveBankOfIndia (@RBI) December 4, 2016
ಆರ್ಬಿಐ ಪ್ರಕಟಣೆಯಲ್ಲಿ ತಿಳಿಸಿರುವಂತೆ ಹೊಸ ನೋಟುಗಳು ಶೀಘ್ರದಲ್ಲೇ ಮುದ್ರಣಗೊಳ್ಳಲಿದ್ದು, 20 ರೂ. ನೋಟಿನಲ್ಲಿ ಮಹಾತ್ಮಾಗಾಂಧಿ ಸೀರೀಸ್ 2005, ಎರಡು ಸಂಖ್ಯಾ ಪ್ಯಾನಲ್ಗಳಲ್ಲಿ ಇನ್ಸೆಟ್ ಲೆಟರ್ ಮತ್ತು ಆರ್ಬಿಐ ಗವರ್ನರ್ ಉರ್ಜಿತ್ ಪಟೇಲ್ ಅವರ ಹಸ್ತಾಕ್ಷರದ ಜೊತೆಗೆ ಮುದ್ರಣ ಇಸವಿ 2016 ರಂದು ಇರಲಿದೆ. ಇನ್ನು 50 ರೂ. ಹೊಸ ನೋಟಿನಲ್ಲಿ ಮಹಾತ್ಮಾಗಾಂಧಿ ಸೀರೀಸ್ 2005, ಆರ್ಬಿಐ ಗವರ್ನರ್ ಉರ್ಜಿತ್ ಪಟೇಲ್ ಅವರ ಹಸ್ತಾಕ್ಷರದ ಜೊತೆ ಮುದ್ರಣ ಇಸವಿ 2016 ಎಂದು ಇರಲಿದ್ದು, ಇನ್ಸೆಟ್ ಲೆಟರ್ ಇರುವುದಿಲ್ಲ ಎಂದು ಹೇಳಿದೆ.
ಹಳೆಯ ರೂ. 20 ಮತ್ತು 50 ರ ನೋಟುಗಳು ಚಲಾವಣೆಯಲ್ಲಿ ಇರುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.