ನವದೆಹಲಿ: ಗದರ್ ಬಂದರು ರಕ್ಷಣೆಗೆ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ಎ) ನೌಕಾ ಹಡಗು, ಜಲಾಂತರ್ಗಾಮಿ ಬೋಟ್ಗಳು ಮತ್ತು ನೌಕಾಪಡೆ ತುಕಡಿಗಳು ಹಾಗೂ 46 ಬಿಲಿಯನ್ ಯುಎಸ್ ಡಾಲರ್ ಸಿಪಿಇಸಿ ನಿಯೋಜಿಸುವ ಬಗ್ಗೆ ಪ್ರತಿಕ್ರಿಯೆ ನೀಡಿದ ಭಾರತೀಯ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲಾಂಬಾ, ಭಾರತೀಯ ನೌಕಾಪಡೆ ಯಾವುದೇ ಕಠಿಣ ಪರಿಸ್ಥಿತಿ ಎದುರಿಸುವ ಸಾಮರ್ಥ್ಯ ಹೊಂದಿದೆ. ಇಂತಹ ಬೆಳವಣಿಗೆಗಳನ್ನು ಮಟ್ಟ ಹಾಕಲು ಸಮರ್ಥವಾಗಿದೆ ಎಂದು ಹೇಳಿದ್ದಾರೆ.
ಪೀಪಲ್ಸ್ ಲಿಬರೇಷನ್ ಆರ್ಮಿ ಪಾಕಿಸ್ಥಾನದ ಕರಾಚಿಯಲ್ಲಿ ಪರಮಾಣು ಜಲಾಂತರ್ಗಾಮಿಯನ್ನು ನಿಯೋಜಿಸಿ ಪೋರ್ಟ್ ಕರೆ ನೀಡಿದ್ದು, ಭಾರತೀಯ ಸೇನೆ ಅದರ ಮೇಲೆ ತೀವ್ರ ನಿಗಾ ಇರಿಸಿದ್ದು, ಅದರ ಚಲನವಲನಗಳ ಮೇಲ್ವಿಚಾರಣೆ ನಡೆಸುತ್ತಿದೆ ಎಂದು ಅಡ್ಮಿರಲ್ ಲಾಂಬಾ ಹೇಳಿದ್ದಾರೆ.
ಭಾರತದ ವಿರುದ್ಧ ನಿಯೋಜನೆಗೊಂಡ ಯಾವುದೇ ಪ್ರಬಲ ಶಕ್ತಿಯನ್ನು ಎದುರಿಸುವ ಸಾಮರ್ಥ್ಯ ಮತ್ತು ಅದಕ್ಕೆ ಅಗತ್ಯ ಶಸ್ತ್ರಾಸ್ತರಗಳು ನಮ್ಮಲ್ಲಿವೆ. ದಾಳಿ ಸಂಭವಿಸಿದಲ್ಲಿ ನಿಭಾಯಿಸುವ ಎಲ್ಲ ಯೋಜನೆಗಳನ್ನು ಭಾರತ ಹೊಂದಿದೆ ಎಂದು ಲಾಂಬಾ ತಿಳಿಸಿದ್ದಾರೆ.
ವರದಿಗಳ ಪ್ರಕಾರ ಚೀನಾ 46 ಬಿಲಿಯನ್ ಡಾಲರ್ ಚೀನಾ-ಪಾಕಿಸ್ಥಾನ ಆರ್ಥಿಕ ಕಾರಿಡಾರ್ ಅಡಿಯಲ್ಲಿ ತನ್ನ ನೌಕಾಡೆಯನ್ನು ಗದರ್ ಬಂದರು ಮತ್ತು ವ್ಯಾಪಾರ ಮಾರ್ಗಗಳ ರಕ್ಷಣೆಗೆ ಪಾಕ್ ನೌಕಾಪಡೆ ಹಡಗುಗಳನ್ನು ಜೊತೆ ನಿಯೋಜಿಸಲಿದೆ ಎಂದು ತಿಳಿದು ಬಂದಿದೆ.
ಚೀನಾ ಮತ್ತು ಪಾಕಿಸ್ಥಾನ ಅರಬ್ಬಿ ಸಮುದ್ರದಲ್ಲಿ ಗದರ್ ಬಂದರು ಮತ್ತು ಕ್ಸಿಂಗ್ಜಿಯಾಂಗ್ ನಡುವೆ 3000 ಕಿ.ಮೀ. ಆರ್ಥಿಕ ಕಾರಿಡಾರ್ ನಿರ್ಮಿಸುತ್ತಿದೆ ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.