ಕೋಲ್ಕತಾ: ಘನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ತನ್ನ ಸ್ಫೂರ್ತಿದಾಯಕ ಮತ್ತು ನವೀನ ಯೋಜನೆಗಳನ್ನು ಗುರುತಿಸಿ ವಿಶ್ವದಾದ್ಯಂತ 10 ನಗರಗಳ ಪೈಕಿ ಕೋಲ್ಕತಾಗೆ ಅತ್ಯುತ್ತಮ ನಗರ 2016′ ಪ್ರಶಸ್ತಿ ಲಭಿಸಿದೆ.
ಕೋಲ್ಕತಾ ಘನತ್ಯಾಜ್ಯ ನಿರ್ವಹಣೆ ಸುಧಾರಣೆ ಪ್ರಾಜೆಕ್ಟ್ ಶೇ.೬೦-೮೦ ಮೂಲ ತ್ಯಾಜ್ಯ ಪ್ರತ್ಯೇಕಿಸುವಿಕೆ ಹೊಂದಿದೆ. ತ್ಯಾಜ್ಯ ಸಾಗಣೆ ಕೇಂದ್ರಗಳಿಂದ ಮತ್ತಷ್ಟು ತ್ಯಾಜ್ಯ ಪ್ರತ್ಯೇಕಿಸಲಾಗುತ್ತಿದೆ ಎಂದು ಮಾಧ್ಯಮ, ವರದಿ ತಿಳಿಸಿದೆ. ಮೇಯರ್ಗಳ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಈ ಬಗ್ಗೆ ಪ್ರಕಟಿಸಲಾಗಿದ್ಗದು, ಮುಂಬಯಿ, ಕೋಲ್ಕತಾ, ಚೆನ್ನೈ ಮತ್ತು ದೆಹಲಿ ಇದರ ಸದಸ್ಯರುಗಳ ಪಟ್ಟಿಯಲ್ಲಿ ಸೇರಿವೆ.
ಈ ಪ್ರಾಜೆಕ್ಟ್ ಖಾಲಿ ಪ್ರದೇಶಗಳಲ್ಲಿ ತ್ಯಾಜ್ಯ ಶೇಖರಣೆ ಮತ್ತು ತ್ಯಾಜ್ಯ ಸುಡುವುದರ ನಿರ್ಮೂಲನೆ ಮತ್ತು ತ್ಯಾಜ್ಯ ಶೇಖರಣೆ ಪ್ರದೇಶದಲ್ಲಿ ಮೀಥೇನ್ ಅನಿಲ ಸಾಂಧ್ರತೆಯ ಮಿತಿ ನಿರ್ವಹಿಸುವ ಗುರಿ ಹೊಂದಿದೆ. ಕೋಲ್ಕತಾ ನಗರ ಈ ಪ್ರತಿಷ್ಠಿತ ಪ್ರಶಸ್ತಿ ಪಡೆದ ಭಾರತದ ಏಕೈಕ ನಗರವಾಗಿದೆ ಎಂದುಸಿ೪೦ ಮೇಯರ್ಗಳ ಸಮ್ಮೇಳನದಲ್ಲಿ ತಿಳಿಸಲಾಗಿದೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.