ನವದೆಹಲಿ: ಕೇಂದ್ರ ಸರ್ಕಾರ ಪೆಟ್ರೋಲ್ ಬಂಕ್ ಮತ್ತು ವಿಮಾನಯಾನ ಟಿಕೆಟ್ಗಳಿಗೆ ಹಳೆ ನೋಟುಗಳ ಬಳಕೆಯ ಅವಕಾಶವನ್ನು ಈ ಹಿಂದಿನ ಡಿಸೆಂಬರ್ 15ರ ಬದಲು ಡಿಸೆಂಬರ್ 2ಕ್ಕೆ ಕಡಿತಗೊಳಿಸಲಾಗಿದೆ.
ಕೇಂದ್ರ ಸರ್ಕಾರ ನವೆಂಬರ್ 24ರಂದು ಮೊಬೈಲ್ ರೀಚಾರ್ಜ್, ಆಸ್ಪತ್ರೆಗಳು, ವಿಮಾನ ಮತ್ತು ರೈಲ್ವೆ ಟಿಕೆಟ್ಗಳು ಮತ್ತಿತರ ಸಾರ್ವಜನಿಕ ಉಪಯುಕ್ತ ಸ್ಥಳಗಳಲ್ಲಿ ರೂ. 500 ಮತ್ತು 1000 ಮುಖಬೆಲೆಯ ನೋಟುಗಳ ಬಳಕೆಯನ್ನು ಡಿ.15 ವರೆಗೆ ವಿಸ್ತರಿಸಿತ್ತು. ಆದರೆ ಬ್ಯಾಂಕ್ ಮತ್ತಿತರ ಕಡೆ ಕೌಂಟರ್ಗಳಲ್ಲಿ ನೋಟು ಬದಲಾವಣೆಯನ್ನು ಸ್ಥಗಿತಗೊಳಿಸಲಾಗಿತ್ತು.
ಇದೀಗ ಡಿಸೆಂಬರ್ 2ರ ಶುಕ್ರವಾರದ ವರೆಗೆ ಮಾತ್ರ ಪೆಟ್ರೋಲ್ ಬಂಕ್, ವಿಮಾನ ನಿಲ್ದಾಣ, ತೈಲ ಕಂಪೆಗಳಲ್ಲಿ, ಟೋಲ್ಗಳಲ್ಲಿ ಬಳಸಬಹುದು ಎಂದು ಕೇಂದ್ರ ರ್ಕಾರ ತಿಳಿಸಿದೆ.
ಹಳೆಯ 500 ರೂ. ನೋಟುಗಳನ್ನು ಡಿ.15ರ ವರೆಗೆ ಬಾಕಿ ಪಾವತಿಗಳಾದ ವಿದ್ಯುತ್ ಮತ್ತು ನೀರಿನ ಬಿಲ್ಗಳ ಪಾವತಿಗೆ ಸೀಮಿತಗೊಳಿಸಲಾಗಿದೆ. ಇನ್ನು ರೈಲ್ವೆ ಟಿಕೆಟ್ ಮತ್ತು ಬಸ್ ನಿಲ್ದಾಣಗಳಲ್ಲಿ 500 ರೂ. ನೋಟುಗಳನ್ನು ಡಿ.15ರ ವರೆಗೆ ಬಳಸಬಹುದಾಗಿದೆ ಎಂದು ಕೇಂದ್ರ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.