ನವದೆಹಲಿ: ಕೇಂದ್ರದ ಇತರ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಗೆ 15 ಹೊಸ ಜಾತಿಗಳ ಸೇರ್ಪಡೆಗೆ ಮತ್ತು 13 ಬೇರೆ ಜಾತಿಗಳ ಮಾರ್ಪಾಡಿಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ.
ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗವು 8 ರಾಜ್ಯಗಳಾದ ಆಸ್ಸಾಂ, ಬಿಹಾರ್, ಹಿಮಾಚಲ ಪ್ರದೇಶ, ಜಾರ್ಖಾಂಡ್, ಮಹಾರಾಷ್ಟ್ರ, ಮಧ್ಯ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಹಾಗೂ ಉತ್ತರಾಖಂಡ್ ಸಂಬಂಧಿಸಿದಂತೆ ಒಟ್ಟು 28 ಬದಲಾವಣೆಗಳೀಗೆ ಶಿಫಾರಸ್ಸು ಮಾಡಿತ್ತು. ಈ ೨೮ರಲ್ಲಿ 15 ಹೊಸ ನಮೂದುಗಳು, 9 ಸಮಾನಾರ್ಥ ಅಥವಾ ಉಪ-ಜಾತಿಗಳು ಹಾಗೂ 4 ತಿದ್ದುಪಡಿಗಳು ಸೇರಿವೆ.
ಈ ಹೊಸ ಬದಲಾವಣೆಗಳಿಂದ ಈ ಜಾತಿ/ಸಮುದಾಯಕ್ಕೆ ಸೇರಿದ ಜನರು ಸರ್ಕಾರಿ ಸೇವೆಗಳಲ್ಲಿನ ಮೀಸಲಾತಿ ಸೌಲಭ್ಯಗಳ ಪ್ರಯೋಜನ ಪಡೆದುಕೊಳ್ಳಬಹುದು ಮತ್ತು ಅಸ್ತಿತ್ವದಲ್ಲಿರುವ ನಿಯಮದ ಪ್ರಕಾರ ಕೇಂದ್ರ ಶಿಕ್ಷಣ ಸಂಸ್ಥೆಗಳಲ್ಲೂ ಸೌಕರ್ಯ ಪಡೆಯಬಹುದು ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಸರ್ಕಾರ ಇದರ ಆಡಳಿತ ನಿರ್ವಹಿಸುತ್ತಿದ್ದು, ವಿವಿಧ ಕಲ್ಯಾಣ ಯೋಜನೆಗಳು, ವಿದ್ಯಾರ್ಥಿವೇತನ ಹಾಗೂ ಇತರೆ ಸೌಲಭ್ಯಗಳನ್ನು ಪಡೆಯಲು ಇವರು ಅರ್ಹರಾಗುತ್ತಾರೆ ಎಂದು ವರದಿಯಾಗಿದೆ.
ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸ್ಸಿನ ಮೇರೆಗೆ, ಒಟ್ಟು 2427 ನಮೂದುಗಳ ಸೇರ್ಪಡೆ ಹಾಗೂ ಅದರ ಇತರೆ ಉಪ-ಜಾತಿಗಳನ್ನು ಒಳಗೊಂಡೆ. ಕೇಂದ್ರದ ಒಬಿಸಿ ಪಟ್ಟಿಯಲ್ಲಿ 25 ರಾಜ್ಯಗಳು ಮತ್ತು 6 ಕೇಂದ್ರಾಡಳಿತ ಪ್ರದೇಶಗಳನ್ನು ಸೂಚಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.