ನವದೆಹಲಿ: ಕೇಂದ್ರ ಸರ್ಕಾರದ ನೋಟು ನಿಷೇಧದ ಬಳಿಕ ಜನ್-ಧನ್ ಖಾತೆಗಳಲ್ಲಿ ಅಧಿಕ ಮಟ್ಟದಲ್ಲಿ ಹಣ ಠೇವಣಿಯಾಗುತ್ತಿದ್ದು, ಕಪ್ಪು ಹಣ ಹೂಡಿಕೆದಾರರಿಂದ ಜನ್-ಧನ್ ಖಾತೆಯ ದುರ್ಬಳಕೆಯನ್ನು ಪರಿಶೀಲಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಜನ್-ಧನ್ ಖಾತೆಯಿಂದ ಹಣ ವಿತ್ಡ್ರಾ ಮಿತಿಯನ್ನು ತಿಂಗಳಿಗೆ 10 ಸಾವಿರಕ್ಕೆ ನಿರ್ಬಂಧಿಸಿದೆ.
ಸಂಪೂರ್ಣ ಕೆವೈಸಿ ಜನ್-ಧನ್ ಖಾತೆದಾರರಿಗೆ ಪ್ರತತಿ ತಿಂಗಳು ಗರಿಷ್ಠ 10 ಸಾವಿರ ರೂ. ವಿತ್ಡ್ರಾ ಮಾಡಲು ಅನುಮತಿಸಲಾಗುವುದು. ಸೀಮಿತ ಅಥವಾ ಕೆವೈಸಿ ರಹಿತ ಖಾತೆದಾರರು ಕೇವಲ ರೂ. 5 ಸಾವಿರ ಮಾತ್ರವೇ ಹಿಂಪಡೆಯಬಹುದು. ಆದರೆ ಪ್ರಾಮಾಣಿಕವಾಗಿ ಹಣ ವಿತ್ಡ್ರಾ ಮಾಡುವವರನ್ನು ಗುರುತಿಸಿ ಅವರ ಖಾತೆ, ಬ್ಯಾಂಕ್ ದಾಖಳೆಗಳನ್ನು ಪರಿಶೀಲಿಸಿ, ಅನಂತರ ಪ್ರಸ್ತುತ ಅನ್ವಯವಾಗಿರುವ ಮಿತಿಯಲ್ಲಿ ಹೆಚ್ಚಿನ ಹಣ ಹಿಂಪಡೆಯಲು ಅನುಮತಿಸಲಾಗುವುದು ಎಂದು ಆರ್ಬಿಐ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು 500 ಮತ್ತು 1000 ರೂ. ನೋಟುಗಳನ್ನು ರದ್ದುಗೊಳಿಸಿದ ಸಂದರ್ಭದಿಂದ ಜನ್-ಧನ್ ಖಾತೆಗಳಲ್ಲಿ ಅನುಮಾನಾಸ್ಪದ ಚಟುವಟಿಕೆಗಳು ಮುಂದುವರೆದಿವೆ ಎನ್ನಲಾಗಿದೆ.
ನವೆಂಬರ್ 16ರ ಮಾಹಿತಿಯಂತೆ ಪ್ರಧಾನಮಂತ್ರಿ ಜನ್ ಧನ್ ಯೋಜನೆಯ ಅಡಿಯಲ್ಲಿ ದೇಶದಾದ್ಯಂತ 25.58 ಕೋಟಿ ಖಾತೆಗಳಲ್ಲಿ 64,252.15 ಕೋಟಿ ರೂ. ಠೇವಣಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.