ನವದೆಹಲಿ: ಓರ್ವ ಮಗ ತನ್ನ ವೈವಾಹಿಕ ಸ್ಥಾನಮಾನವನ್ನು ಲೆಕ್ಕಿಸದೇ ಹೆತ್ತವರ ಸ್ವಂತ ಅಧೀನದಲ್ಲಿರುವ ಮನೆಯಲ್ಲಿ ವಾಸಿಸಲು ಯಾವೂದೇ ಕಾನೂನಾತ್ಮಕ ಹಕ್ಕು ಹೊಂದಿಲ್ಲ. ಆತ ಕೇವಲ ಪಾಲಕರು ‘ಕರುಣೆ’ (mercy) ತೋರಿದಲ್ಲಿ ವಾಸಿಸಬಹುದು ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ಹೆತ್ತವರ ಸ್ವಂತ ಅಧೀನದಲ್ಲಿರುವ ಮನೆಯಲ್ಲಿ ವಿವಾಹಿತ ಅಥವಾ ಅವಿವಾಹಿತ ಮಗ ವಾಸಿಸಲು ಕಾನೂನು ಹಕ್ಕು ಹೊಂದಿಲ್ಲ. ಆತ ಪೋಷಕರು ತಮ್ಮ ದಯೆ ತೋರಿ ವಾಸಿಸಲು ಅನುಮತಿ ನೀಡಿದ ಸಮಯದ ವರೆಗೆ ಮಾತ್ರವೇ ಪೋಷಕರ ಮನೆಯಲ್ಲಿ ವಾಸಿಸಬಹುದು ಎಂದು ಜಸ್ಟೀಸ್ ಪ್ರತಿಭಾ ರಾಣಿ ಆದೇಶ ಹೊರಡಿಸಿದ್ದಾರೆ.
ಪೋಷಕರು ದೀರ್ಘಕಾಲದ ಸೌಜನ್ಯದ ಸಂಬಂಧಗಳು ಇರುವವರೆಗೆ ಆತನಿಗೆ ಮನೆಯಲ್ಲಿ ವಾಸಿಸಲು ಅನುಮತಿ ನೀಡಿದಲ್ಲಿ, ಅವರು ಜೀವನದುದ್ದಕ್ಕೂ ಆತನ ಹೊರೆ ಅನುಭವಿಸಬೇಕು ಎಂದರ್ಥವಲ್ಲ ಎಂದು ಕೋರ್ಟ್ ತಿಳಿಸಿದೆ.
ವ್ಯಕತಿಯೋರ್ವ ತನ್ನ ಅಧೀನದಲ್ಲಿರುವ ಮನೆಯಿಂದ ಆತನ ಮಗ ಮತ್ತು ಸೊಸೆಯನ್ನು ತೆರವುಗೊಳಿಸುವಂತೆ ಮೊಕದ್ದಮೆ ಹೂಡಿದ್ದರು. ಕೆಳದರ್ಜೆಯ ನ್ಯಾಯಾಲಯದ ತೀರ್ಪಿನ ವಿರುದ್ಧ ಆತ ಸಲ್ಲಿಸಿದ ಮನವಿಯ ವಿಚಾರಣೆ ವೇಳೆ ನ್ಯಾಯಾಲಯ ಪೋಷಕರ ಪರ ತೀರ್ಪು ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.