ನವದೆಹಲಿ: ಆದಾಯ ಘೋಷಣೆ ಯೋಜನೆ (ಐಡಿಎಸ್)ನ ಪಾವತಿ ದಿನಾಂಕ ಸಮೀಪಿಸುತ್ತಿದ್ದು, ನವೆಂಬರ್ 30ರ ಒಳಗಾಗಿ ಐಡಿಎಸ್ ತೆರಿಗೆದಾರರು ತಮ್ಮ ಮೊದಲ ಕಂತು ಪಾವತಿಸದಿದ್ದಲ್ಲಿ ಅಂತಹವರ ತೆರಿಗೆ ಗೋಷಣೆಗಳು ಅಮಾನ್ಯವಾಗಲಿದೆ ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ.
ದೇಶೀಯ ಕಪ್ಪು ಹಣ ಹೂಡಿಕೆದಾರರು ತಮ್ಮ ಸಂಪತ್ತು ಬಹಿರಂಗಪಡಿಸುವುದರೊಂದಿಗೆ ಶೇ.45ರಷ್ಟು ತೆರಿಗೆ ಮತ್ತು ದಂಡ ಪಾವತಿಸಲು ಜೂನ್ನಿಂದ ಸೆಪ್ಟೆಂಬರ್ ತಿಂಗಳ ವರೆಗೆ ಅವಕಾಶ ಕಲ್ಪಿಸಲಾಗಿತ್ತು.
ನ.೩೦ರ ಒಳಗೆ ಮೊದಲ ಕಂತಿನಲ್ಲಿ ಶೇ.25ರಷ್ಟು ತೆರಿಗೆ ಪಾವತಿಸಬೇಕಿದ್ದು, ಮಾರ್ಚ್ 31, 2017ರ ಒಳಗಾಗಿ ಎರಡನೇ ಕಂತಿನಲ್ಲಿ ಶೇ.25ರಷ್ಟು ತೆರಿಗೆ ಪಾವತಿಸಬೇಕಿದೆ. ಸೆಪ್ಟೆಂಬರ್ 30, 2017ರ ಒಳಗೆ ಉಳಿತ ಎಲ್ಲ ಬಾಕಿಯನ್ನು ತೆರಿಗೆದಾರರು ತುಂಬಬೇಕಿದೆ ಎಂದು ಇಲಾಖೆ ತಿಳಿದೆ.
ಐಡಿಎಸ್ ಯೋಜನೆಯಡಿ ಸುಮಾರಿ 64,275 ತೆರಿಗೆದಾರರು 65,250 ಕೋಟಿ ರೂ. ಪಾವತಿಸಿ ತಮ್ಮ ಸಂಪತ್ತು ಘೋಷಿಸಿದ್ದಾರೆ ಎಂದು ತೆರಿಗೆ ಇಲಾಖೆ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.