ಅಜ್ಮೇರ್: ಸೂಫಿ ಸಂತ ಖ್ವಾಜಾ ಮೊಯಿನುದ್ದಿನ್ ಚಿಸ್ತಿ ಅವರ 13ನೇ ಶತಮಾನದ ಐತಿಹಾಸಿಕ ಶರೀಫ್ ದರ್ಗಾಕ್ಕೆ ಭೇಟಿ ನೀಡಿದ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ದರ್ಗಾದಲ್ಲಿ ಭಾರತ-ಪಾಕಿಸ್ಥಾನದ ಗಡಿಯಲ್ಲಿ ಶಾಂತಿ ಮತ್ತು ಎರಡು ದೇಶಗಳ ನಡುವಿನ ಉತ್ತಮ ಸಂಬಂಧಗಳಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ದರ್ಗಾದಲ್ಲಿ ‘ವಿಜರತ್’ (ಪ್ರಾರ್ಥನೆ) ಸಲ್ಲಿಸಿದ ಮುಫ್ತಿ ಅವರು, ಬಳಿಕ ಸಂತ ‘ಗರೀಬ್ ನವಾಜ್’ ಸಮಾಧಿಗೆ ಚಾದರ್ ಅರ್ಪಿಸಿದರು.
ನಂತರ ವರದಿಗಾರರೊಂದಿಗೆ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಮತ್ತು ಸಮೃದ್ಧಿ ನಿಧಾನವಾಗಿ ಮರಳುತ್ತಿದೆ. ಆದರೂ ಹಲವಾರು ವಿದ್ಯಾರ್ಥಿಗಳು ಶಾಲೆಗಳಿಗೆ ಹೋಗುತ್ತಿಲ್ಲ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.